Advertisement

ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ನಾಗರ ಪಂಚಮಿ ಆಚರಣೆಗೆ ಅವಕಾಶವಿಲ್ಲ: ಡಿಸಿ ಜಗದೀಶ್

04:30 PM Jul 24, 2020 | keerthan |

ಉಡುಪಿ: ಹಿಂದೂ ಸಂಪ್ರದಾಯದ ಮೊದಲ ಹಬ್ಬವೆಂದು ಕರೆಯಲ್ಪಡುವ ನಾಗರ ಪಂಚಮಿ ಇನ್ನೊಂದು ದಿನವಷ್ಟೇ ಬಾಕಿಯಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬಕ್ಕೆ ಈ ಬಾರಿ ಕೋವಿಡ್ ಭೀತಿ ಎದುರಾಗಿದೆ. ಸಂಪ್ರದಾಯದಂತೆ ನಾಗಬನಗಳಿಗೆ ಹೋಗಿ ಪೂಜೆ ಮಾಡಬಹುದೇ ಎಂದು ಜನರು ಗೊಂದಲದಲ್ಲಿದ್ದು, ಈ ಕುರಿತಾಗಿ ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Advertisement

ಕೋವಿಡ್-19 ಸೋಂಕಿನ ಕಾರಣದಿಂದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮಾರ್ಗ ಸೂಚಿಯ ಪ್ರಕಾರ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಮಾಡಲು ಅವಕಾಶ ಇಲ್ಲ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಇದು ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಕೋವಿಡ್ ಪ್ರಕರಣಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಾಗಬನದಲ್ಲಿ ಸಾರ್ವಜನಿಕರು ಸೇರಿ ಪೂಜೆ ಮಾಡಿದರೆ, ಅಲ್ಲಿ ಒಬ್ಬರಿಗೆ ಸೋಂಕು ಇದ್ದರೆ, ಅದು ಅಲ್ಲಿ ಸೇರಿರುವ ಎಲ್ಲರಿಗೂ ತಾಗುವ ಸಾಧ್ಯತೆಯಿದೆ. ಹಾಗಾಗಿ ಆರೋಗ್ಯದ ಹಿತದೃಷ್ಠಿಯಿಂದ ಈ ಬಾರಿ ಮನೆಯಲ್ಲಿ ಹಬ್ಬವನ್ನು ಆಚರಿಸಿ. ಮನೆಯಲ್ಲಿ ಹಬ್ಬ ಆಚರಿಸಲು ಯರದೇ ಅನುಮತಿ ಬೇಡ ಎಂದು ಡಿಸಿ ಸ್ಪಷ್ಟಪಡಿಸಿದರು.

ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು. ಇಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next