ನವದೆಹಲಿ: ಹೊಸ ರಾಜ್ಯ ರಚನೆಗೆ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ಕುರಿತಂತೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು,ಬುಂದೇಲ್‌ಖಂಡ್ ರಾಜ್ಯ ರಚನೆಗೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದರು.
“ಹೊಸ ರಾಜ್ಯಗಳ ರಚನೆಗೆ ವಿನಂತಿಸಿದ ವಿವಿಧ ವೇದಿಕೆಗಳು/ಸಂಘಟನೆಗಳಿಂದ ಪ್ರಸ್ತಾವನೆಗಳು/ವಿನಂತಿಗಳು ಸರ್ಕಾರದಿಂದ ಸ್ವೀಕರಿಸಲ್ಪಟ್ಟಿವೆ. ಆದರೆ, ಪ್ರಸ್ತುತ ಯಾವುದೇ ಹೊಸ ರಾಜ್ಯವನ್ನು ರಚಿಸುವ ಬಗ್ಗೆ ಸರ್ಕಾರದೊಂದಿಗೆ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ 39 ನಗರಗಳು ಭಾರತದಲ್ಲೇ ಇವೆಯಂತೆ…