Advertisement

ಮುರ ಜಂಕ್ಷನ್‌ಗೆ ಬೇಕು ಪ್ರಯಾಣಿಕರ ತಂಗುದಾಣ

01:55 AM Dec 20, 2018 | Team Udayavani |

ಕಬಕ: ಕಬಕ ಗ್ರಾ.ಪಂ. ಹಾಗೂ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಮುರ ಜಂಕ್ಷನ್‌ನಲ್ಲಿ ಸೂಕ್ತ ಪ್ರಯಾಣಿಕರ ತಂಗುದಾಣವಿಲ್ಲದೆ ಜನ ಪರದಾಟ ನಡೆಸುವಂತಾಗಿದೆ. ಇಲ್ಲಿ ಹಳೆಯದಾದ ಚಿಕ್ಕ ಬಸ್‌ ತಂಗುದಾಣ ಇತ್ತಾದರೂ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಅದು ರಸ್ತೆಗಿಂತ ತೀರಾ ಕೆಳಮಟ್ಟಕ್ಕೆ ಹೋಗಿದ್ದು, ಮಳೆಗಾಲದಲ್ಲಿ ತಂಗುದಾಣದ ಒಳಗೆ ನೀರು ತುಂಬಿ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಅದು ಈಗ ಪ್ರಯಾಣಿಕರ ಉಪಯೋಗಕ್ಕೆ ಬರುತ್ತಿಲ್ಲ.

Advertisement

ದಿನ ನಿತ್ಯ ಕೆದಿಲ, ಪಟ್ನೂರು, ಕಲ್ಲೇಗ, ಕಲೆಂಬಿ, ಪೋಳ್ಯ, ಶಾಂತಿನಗರ, ಪಲ್ಲತಾರು, ಬನಾರಿ ಭಾಗದ ಜನರು ಮಂಗಳೂರು, ವಿಟ್ಲ, ಕಾಸರಗೋಡು ಮುಂತಾದ ಕಡೆಗಳಿಗೆ ಪ್ರಯಾಣಿಸಲು ಮುರ ಜಂಕ್ಷನ್‌ ಅವಲಂಬಿಸುತ್ತಾರೆ. ಮುರ ಜಂಕ್ಷನ್‌ ರಸ್ತೆ ಮೂಲಕ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಕಬಕ – ಸುರತ್ಕಲ್‌ ರಾಜ್ಯ ಹೆದ್ದಾರಿಗಳಲ್ಲಿ ಚಲಿಸುವ ನೂರಾರು ಸರಕಾರಿ ಹಾಗೂ ಖಾಸಗಿ ಬಸ್‌ಗಳು, ಇತರ ಸಾರ್ವಜನಿಕ ವಾಹನಗಳಿಗಾಗಿ ಇಲ್ಲಿ ರಸ್ತೆ ಬದಿಯಲ್ಲಿ ಕಾಯಬೇಕಾಗುತ್ತದೆ. ವೃದ್ಧರು, ಗರ್ಭಿಣಿಯರು, ಚಿಕಿತ್ಸೆಗೆ ತೆರಳುವ ರೋಗಿಗಳು, ಚಿಕ್ಕ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ತತ್‌ಕ್ಷಣ ಇಲ್ಲಿ ನೂತನ ಬಸ್‌ ತಂಗುದಾಣ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next