ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ರಾಷ್ಟ್ರೀಯ ಹೆದ್ದಾರಿಗಳ ಆಜುಬಾಜಿನಲ್ಲಿರುವ ಡಾಬಾಗಳಿಗೆ ಕಠಿಣ ಸೂಚನೆ ರವಾನಿಸಿದೆ. ಡಾಬಾಗಳು ವಾಹನ ನಿಲುಗಡೆಗೆ ಜಾಗ ನೀಡದಿದ್ದರೆ, ಅವುಗಳನ್ನು ಮುಚ್ಚಲು ಆದೇಶಿಸಲಾಗುತ್ತದೆ ಎಂದು ತಿಳಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮೊದಲ ಹಂತವಾಗಿ ಲಕ್ನೋ-ಸೀತಾಪುರ, ಕಾನ್ಪುರ-ಫೈಜಾಬಾದ್, ರಾಯ್‌ಬರೇಲಿ ಹೆದ್ದಾರಿಗಳ ಡಾಬಾ ಮಾಲಿಕರಿಗೆ ನೋಟಿಸ್‌ಗಳನ್ನು ನೀಡಲಾಗುತ್ತದೆ. ನಂತರ ಉಳಿದ ಪ್ರದೇಶಗಳಿಗೂ ಈ ನೋಟಿಸ್‌ಗಳನ್ನು ವಿಸ್ತರಣೆ ಮಾಡಲಾಗುತ್ತದೆ. ಡಾಬಾಗಳು ವಾಹನ ನಿಲುಗಡೆಗೆ ಜಾಗ ನೀಡಿವೆಯೇ? ಎರಡು ಢಾಬಾಗಳ ನಡುವೆ ಎಷ್ಟು ಅಂತರವಿದೆ? ಎರಡೂ ಪ್ರತ್ಯೇಕ ಜಾಗವನ್ನೇ ವಾಹನಗಳಿಗೆ ನೀಡಿವೆಯಾ? ಇಬ್ಬನಿ ಬಿದ್ದು ಸ್ಥಳ ಮಸುಕಾಗಿರುವ ಹೊತ್ತಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿವೆಯಾ? ಎಂಬುದನ್ನೆಲ್ಲ ಗಮನಿಸಲಾಗುತ್ತದೆ.
ಯಾವುದೇ ಕೊರತೆಯಿದ್ದರೂ ಕ್ರಮ ಖಚಿತ! ಅಷ್ಟು ಮಾತ್ರವಲ್ಲ ವಾಹನಗಳನ್ನು ಚಾಲಕರು ಯದ್ವಾತದ್ವಾ ನಿಲ್ಲಿಸಿದ್ದರೂ, ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
Related Articles
ಡಾಬಾಗಳಲ್ಲಿ ನಿಲ್ಲಿಸಲು ಜಾಗವಿಲ್ಲದೇ ಬಹುತೇಕ ವಾಹನಗಳನ್ನು ಹೆದ್ದಾರಿಗಳಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ ಎಂದು ಎನ್‌ಎಚ್‌ಎಐ ಹೇಳಿದೆ.