Advertisement
ಗುರುವಾರ ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಬಂಟ್ವಾಳ ಪೇಟೆಯ ಸಂಚಾರ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ನಡೆದ ವರ್ತಕರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ಪ್ರಸ್ತುತ ಒಂದು ವಾರದವರೆಗೆ ಯಾವುದೇ ದಂಡ ವಿಧಿಸದೆ ಎಚ್ಚರಿಕೆ ನೀಡಲಾಗುತ್ತದೆ. ಬಳಿಕ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು.
ಬಂಟ್ವಾಳ ಪೇಟೆಯ ಅಂಗಡಿಗಳಿಂದ ಸರಕು ಕೊಂಡುಹೋಗಲು, ಸರಕನ್ನು ತರುವ (ಲೋಡ್ – ಅನ್‌ಲೋಡಿಂಗ್) ಲಾರಿ/ಇತರ ವಾಹನಗಳಿಗೆ ಸಮಯ ನಿಗದಿ ಕುರಿತು ವರ್ತಕರಿಂದ ಅಭಿಪ್ರಾಯ ಪಡೆದು, ಬೆಳಗ್ಗೆ 8ರ ಮೊದಲು, ಅಪರಾಹ್ನ 1ರಿಂದ 3 ಹಾಗೂ ರಾತ್ರಿ 7ರ ಬಳಿಕ ಸರಕು ವಾಹನಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಕೆಲವು ವರ್ತಕರು ತಮ್ಮ ಅಂಗಡಿಯ ಹೊರಗೆ, ವಾಹನ ಸಂಚಾರಕ್ಕೆ ತೊಂದರೆ ಯಾಗುವ ರೀತಿಯಲ್ಲಿ ವ್ಯಾಪಾರ ಮಾಡು ತ್ತಿದ್ದಾರೆ. ಜತೆಗೆ ಅಂಗಡಿಗಳ ಮುಂಭಾಗ ಛಾವಣಿ ಶೀಟ್‌ಗಳು ರಸ್ತೆಗೆ ಬಂದಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಕ್ರಮಕ್ಕೆ ಡಿವೈಎಸ್‌ಪಿ ಅವರು ಸಂಚಾರ ಠಾಣೆಯ ಪಿಎಸ್‌ಐ ರಾಮ ನಾಯ್ಕ ಅವರಿಗೆ ತಿಳಿಸಿದರು.
Related Articles
Advertisement
ಸಭೆಯ ತೀರ್ಮಾನಗಳನ್ನು ಬಂಟ್ವಾಳ ಪುರಸಭೆಯ ಗಮನಕ್ಕೆ ತರುವಂತೆ ವರ್ತ ಕರು ಪೊಲೀಸರಿಗೆ ಮನವಿ ಮಾಡಿ ದರು. ಸಂಚಾರ ನಿಯಂತ್ರಣಕ್ಕೆ ಹೋಂ ಗಾರ್ಡ್ ಬದಲು ಪೊಲೀಸ್ ಸಿಬಂದಿ ಯನ್ನೇ ನಿಯೋಜಿಸುವಂತೆ ಆಗ್ರಹಿಸಿದರು.
ಪ್ರೊಬೆಷನರಿ ಐಪಿಎಸ್ ಅಧಿಕಾರಿ ರಂಜಿತ್, ನಗರ ಠಾಣಾ ಪಿಎಸ್‌ಐ ಅವಿನಾಶ್, ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಉಪಸ್ಥಿತರಿದ್ದರು.
ಹೆದ್ದಾರಿಯವರಿಗೆ ಸೂಚನೆ: ಡಿವೈಎಸ್‌ಪಿ ಭರವಸೆಬಿ.ಸಿ. ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಿರ್ವಹಿಸು ತ್ತಿರುವವರು ಬೇಕಾಬಿಟ್ಟಿ ರಸ್ತೆಯನ್ನು ಅಗೆದು ಹಾಕುವುದರಿಂದ ಯಾವುದೇ ವಾಹನ ತೆರಳದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರಿಗೆ ಎಚ್ಚರಿಕೆ ನೀಡುವಂತೆ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಅವರು ಆಗ್ರಹಿಸಿದರು. ಈ ಕುರಿತು ಸಂಬಂಧಪಟ್ಟವರನ್ನು ಕರೆಸಿ ಸೂಚನೆ ನೀಡುವ ಕುರಿತು ಡಿವೈಎಸ್‌ಪಿ ಅವರು ಭರವಸೆ ನೀಡಿದರು.