Advertisement
ಜುಲೈ 8ರಂದು ಪೊಲೀಸರ ಗುಂಡಿನ ದಾಳಿಗೆ ಮೂವರು ಯುವಕರು ಪ್ರಾಣಬಿಟ್ಟರು. ಅವರ ರಕ್ತ ಡಾರ್ಜಿಲಿಂಗ್‌ನ ರಸ್ತೆಗಳ ತುಂಬೆಲ್ಲ ಚೆಲ್ಲಿತು. ಗ್ಯಾಂಗ್‌ಟಾಕ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದವನೊಬ್ಬ ಜುಲೈ 11ರಂದು ಮೃತಪಟ್ಟ. ಅವರಿಗಿಂತ ಮೊದಲು, ಅಂದರೆ ಕಳೆದ ತಿಂಗಳು ಪೊಲೀಸರ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಡಾರ್ಜಿಲಿಂಗ್‌ನ ಬೆಳವಣಿಗೆಗಳ ಗಾಂಭೀರ್ಯ ವನ್ನು ಅರಿಯದೇ ಹೋದರೆ ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲ, ತಮ್ಮ ಅಹಂಕಾರದ ಕುರ್ಚಿ ಗಳಲ್ಲಿ ಕುಳಿತವರು ಕೆಳಕ್ಕಿಳಿದು ನಿಜ ಸ್ಥಿತಿಯನ್ನು ಅರಿಯಲು ಇನ್ನೆಷ್ಟು ದಿನ ಇದೇ ಪರಿಸ್ಥಿತಿ ಮುಂದುವರಿಯಬೇಕು?
Related Articles
ದಲ್ಲಿರುವ ಭಾರತ ವಿರೋಧಿ ಗುಂಪುಗಳೂ ತಮ್ಮ ಆಂಟೆನಾ ಗಳನ್ನು ಏರಿಸಿಕೊಂಡು ನಿಂತಿವೆ. ಗದ್ದಲದ ಲಾಭ ಪಡೆದು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಅವು ತಯಾರಿ ನಡೆಸಿವೆ. ಹೀಗೆಲ್ಲ ಆಗುವುದಕ್ಕೆ ಕಾರಣವೆಂದರೆ ಭಾರತದ ಪ್ರಧಾನ ಭೂಭಾಗವನನ್ನು ಈಶಾನ್ಯದೊಂದಿಗೆ ಸಂಪರ್ಕಿಸುವ “ಚಿಕನ್ ನೆಕ್’ ಎಂಬ ಕಿರಿದಾದ 27 ಕಿಲೋಮೀಟರ್ ಪಟ್ಟಿಯು, ನೇಪಾಳ, ಬಾಂಗ್ಲಾ ಮತ್ತು ಭೂತಾನ್‌ನೊಂದಿಗೆ ಗಡಿ ಹಂಚಿಕೊಂಡಿರುವುದು. ಚೀನಾ ಕೂಡ ಈ ಪ್ರದೇಶಜ ಹತ್ತಿರದಲ್ಲೇ ಇದೆ.
Advertisement
ಮೊದಲಿನಂತೆ ಈಗಲೂ ಕೂಡ ಪಶ್ಚಿಮ ಬಂಗಾಳದಲ್ಲಿ ತಪ್ಪು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ ಇದನ್ನು ಕೇಳುವವರು ಯಾರು? ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿನ ಎರಡು ಸನ್ನಿವೇಶಗಳನ್ನು ನಿಭಾಯಿಸಿದ ರೀತಿಯಲ್ಲೇ ಇಬ್ಬಗೆತನ ವಿದೆ. ಗೋರ್ಖಾಲ್ಯಾಂಡ್ ಬೇಡಿಕೆಯನ್ನು ಪರಿಹರಿಸಲು ರಾಜಕೀಯ ಮಾರ್ಗವನ್ನು ಬಿಟ್ಟು ಬೇರಾವ ಮಾರ್ಗವೂ ಕೆಲಸ ಮಾಡುವುದಿಲ್ಲ. ಇದು ಗೊತ್ತಿದ್ದರೂ ಮಮತಾ ಪೊಲೀಸರನ್ನು ಜನರ ಮೇಲೆ ಹರಿಬಿಡುತ್ತಿದ್ದಾರೆ. ಇನ್ನೊಂದೆಡೆ ಬಸೀರ್‌ಹಾಟ್‌ನಲ್ಲಿ ಕಠಿಣ ಕಾನೂನು ಸುವ್ಯವಸ್ಥೆಯ ಅಗತ್ಯವಿದೆ. ಆದರೆ ತಮ್ಮ ಪಕ್ಷದ ಓಟ್‌ಬ್ಯಾಂಕ್ ಅನ್ನು ಕಳೆದುಕೊಳ್ಳಬಹುದೆಂಬ ಭಯದಿಂದಾಗಿ ಅಲ್ಲಿ ಮಮತಾ ತುಂಬಾ ಸೌಮ್ಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಸುಮ್ಮನೇ ಯೋಚಿಸಿ ನೋಡಿ. ಬಸೀರ್‌ಹಾಟ್‌ನಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ಕಾರ್ತಿಕ್ ಘೋಷ್ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಆದರೆ ಡಾರ್ಜಿಲಿಂಗ್‌ನಲ್ಲಿ ಮೃತಪಟ್ಟ 7 ಜನರಲ್ಲಿ ಒಬ್ಬೇ ಒಬ್ಬನ ಹೆಸರಾದರೂ ಗೊತ್ತಿದೆಯೇ? ಡಾರ್ಜಿಲಿಂಗ್‌ನಲ್ಲಿ ಇನ್ನಷ್ಟು ಪಡೆಗಳನ್ನು ನಿಯೋಜಿಸುವ ತಂತ್ರಕ್ಕೆ ಮೊರೆ ಹೋಗುವುದು ಮತ್ತು ಆ ಮೂಲಕ ನಾಯಸಮ್ಮತ ಆಂದೋಲನವೊಂದನ್ನು ಪುಡಿ ಮಾಡಲು ಪ್ರಯತ್ನಿಸುವುದು ನಿಜಕ್ಕೂ ಬಹಳ ಅಪಾಯಕಾರಿ ನಡೆ. ಇದರಿಂದಾಗಿ ಡಾರ್ಜಿಲಿಂಗ್‌ನಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಸ್ಥಳೀಯ ರಾಜಕೀಯ ನಾಯಕತ್ವದ ಮೇಲೆ ಗೂಬೆ ಕೂರಿಸುವ ಅವಕಾಶ ಮಮತಾ ಸರ್ಕಾರಕ್ಕೆ ಸಿಗುತ್ತದೆ ಎನ್ನುವುದು ಖರೆ. ಕೇಂದ್ರ ಬಿಜೆಪಿ ಮತ್ತು ಜೋರ್ಖಾ ಜನಮುಕ್ತಿ ಮೊರ್ಚಾವನ್ನು ಒಂದೇ ಕಲ್ಲಿನಲ್ಲಿ ಹೊಡೆದುರುಳಿಸುವ ಅವಕಾಶವದು. ಆದರೆ ಇದರಿಂದಾಗಿ ಎಷ್ಟು ಬೆಲೆ ತೆರಬೇಕಾಗಬಹುದು ಎಂದು ರಾಜ್ಯ ಸರ್ಕಾರ ಯೋಚಿಸಿದೆಯೇ? ಕೇಂದ್ರೀಯ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಾ ಹೋದರೆ ಡಾರ್ಜಿಲಿಂಗ್‌ನ ಜನರ ಜೀವಕ್ಕೆ ಅಪಾಯ ಹೆಚ್ಚುತ್ತಾ ಹೋಗುವುದಿಲ್ಲವೇ? ಸಂವಿಧಾನದಲ್ಲಿ ಆರ್ಟಿಕಲ್ 3 ಇರುವವರೆಗೂ ಹೊಸ ರಾಜ್ಯಗಳ ರಚನೆಗೆ ಅವಕಾಶವಿದ್ದೇ ಇರುತ್ತದೆ. ಸತ್ಯವೇನೆಂದರೆ ಚಿಕ್ಕ ರಾಜ್ಯಗಳು ಭಾರತದ ಮತ್ತು ಭಾರತೀಯರ ಬೆಳವಣಿಗೆಗೆ ಸಹಕರಿಸಿವೆ. ಗೋವಾ, ಸಿಕ್ಕಿಂ, ದೆಹಲಿ, ಹಿಮಾಚಲ ಪ್ರದೇಶ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್‌ಗಢ ಸೇರಿದಂತೆ ಇನ್ನಿತರ ಚಿಕ್ಕ ರಾಜ್ಯಗಳು ದೊಡ್ಡ ರಾಜ್ಯಗಳಿಗಿಂತ ಹೆಚ್ಚು ಯಶಸ್ಸು ಸಾಧಿಸಿವೆ. ವಿಭಜನೆಯಾದರೆ ಒಂದೇ ಸಾರಿಗೆ ಸಮಸ್ಯೆಯೆಲ್ಲವೂ ಬಗೆಹರಿಯುವುದರಿಂದ ಬಂಗಾಳಕ್ಕೂ ಲಾಭವಾಗಲಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಅನಿಶ್ಚಿತತೆಯ ಸಮಸ್ಯೆಯೂ ದೂರವಾಗುತ್ತದೆ. ಈ ಕಾರಣಕ್ಕಾಗಿಯೇ, ಮಮತಾ ಬ್ಯಾನರ್ಜಿ ಯವರೇ, ದಯವಿಟ್ಟೂ ನಾವು ಹೊಡೆದಾಡುವುದು ಬೇಡ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸೋಣ. ಆದರೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಒಂದು ಕ್ಷಣ ಸುಮ್ಮನಾಗಿ ಈ ಪ್ರಶ್ನೆಯನ್ನು ಕೇಳಿಕೊಳ್ಳಿ: ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಡುತ್ತಿರುವ ಒಂದು ಸಮಸ್ಯೆಯನ್ನು ಅಲ್ಪಕಾಲದಲ್ಲಿ ಬಗೆಹರಿಸಲು ಸಾಧ್ಯವಿದೆಯೇ? ಅಥವಾ ಐದು ವರ್ಷದ ಹಿಂದೆ ಕೈಗೊಂಡ ಕ್ರಮಗಳನ್ನೇ ಈಗ ಕೈಗೊಂಡರೆ ಫಲಪ್ರದ ಮತ್ತು ಶಾಶ್ವತ ಪರಿಹಾರ ಸಿಗುತ್ತದೆಯೇ? ಮುಖ್ಯಮಂತ್ರಿಗಳೇ, ಇಲ್ಲಿಯವರೆಗಿನ ಸೋಕಾಲ್ಡ್ ಪರಿಹಾರೋಪಾಯಗಳೆಲ್ಲ ವಿಫಲಗೊಂಡಿರುವಾಗ ವಿಭಿನ್ನ ಮಾರ್ಗವನ್ನು ಅನುಸರಿಸುವ ಅಗತ್ಯ ರಾಜ್ಯ ಸರ್ಕಾರಕ್ಕಿದೆಯಲ್ಲವೇ? ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಡಾರ್ಜಿಲಿಂಗ್‌ನ ಬೆಟ್ಟಗಳು ನಗುವುದಿಲ್ಲ. ಈ ದೇಶಕ್ಕಾಗಿ ತನ್ನ ಬೆವರು, ಕಣ್ಣೀರು ಮತ್ತು ರಕ್ತವನ್ನು ಹರಿಸಿರುವ ಗೋರ್ಖಾಗಳಿಗೆ ಪ್ರೀತಿ ಮತ್ತು ಒಪ್ಪಿಗೆ ಸಿಗುವವರೆಗೂ ಇಲ್ಲಿನ ಬೆಟ್ಟಗಳು ನಗುವುದಿಲ್ಲ. ತಮ್ಮನ್ನು ಈ ದೇಶದ ಎರಡನೆಯ ದರ್ಜೆಯ ನಾಗರಿಕರಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಭಾವನೆಯು ಗೋರ್ಖಾಗಳ ಮನದಿಂದ ದೂರವಾಗುವಂಥ ಪರಿಹಾರ ಬೇಕು. ಆದರೆ ಇದೆಲ್ಲ ಸಾಧ್ಯವಾಗಬೇಕೆಂದರೆ, ಅಧಿಕಾರದಲ್ಲಿರುವವರಿಗೆ ದೂರದೃಷ್ಟಿಯಿರಬೇಕು, ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡುವ ಸಾಮರ್ಥಯವಿರಬೇಕು. ತಾತ್ಕಾಲಿಕ ಪರಿಹಾರಗಳಿಂದಾಗಿ ಗಾಯದ ಮೇಲೆ ಬ್ಯಾಂಡೇಜ್ ಸುತ್ತಿದಂತಾಗುತ್ತದೆಯೇ ಹೊರತು, ಮುಲಾಮು ಹಚ್ಚಿದಂತಲ್ಲ.
ಡಾರ್ಜಿಲಿಂಗ್ ಅನ್ನು ಸ್ವಿಜರ್‌ಲೆಂಡ್ ಮಾಡಿ ಎಂದು ನಾವು ಎಂದೂ ಬಯಸಿಲ್ಲ, ಆದರೆ ಅದು ಮತ್ತೂಂದು ಕಾಶ್ಮೀರವಾಗು ವುದೂ ನಮಗೆ ಬೇಕಿಲ್ಲ.
(ಲೇಖಕರು ಗೋರ್ಖಾ ಜನಮುಕ್ತಿ ಮೋರ್ಚಾದ ಸದಸ್ಯರು, ಮಾಜಿ ಪತ್ರಕರ್ತರು)
– ಸ್ವರಾಜ್ ಥಾಪಾ