Advertisement

ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ: ಯುಜಿಸಿ

01:12 AM Oct 04, 2022 | Team Udayavani |

ಹೊಸದಿಲ್ಲಿ: ಪಿಎಚ್‌ಡಿ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿಗಳನ್ನು ಹೊಂದುವಂತಿಲ್ಲ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಸ್ಪಷ್ಟಪಡಿಸಿದೆ.

Advertisement

ಈ ಕುರಿತು ಉನ್ನತ ಶಿಕ್ಷಣ ಸಂಸ್ಥೆ ಗಳಿಗೆ ಪತ್ರ ಬರೆದಿರುವ ಯುಜಿಸಿ, “ಪಿಎಚ್‌ಡಿ ಹೊರತುಪಡಿಸಿ ಉಳಿದ ಶೈಕ್ಷಣಿಕ ಕೋರ್ಸ್‌ಗಳಿಗೆ ಸೇರ್ಪಡೆಯಾದವರು ಮಾತ್ರ ನೂತನ ನಿಯಮಗಳ ಪ್ರಕಾರ ಏಕಕಾಲ ದಲ್ಲಿ ಎರಡು ಪದವಿ ಗಳನ್ನು ಹೊಂದಲು ಅವಕಾಶವಿದೆ’ ಎಂದು ಉಲ್ಲೇಖಿಸಿದೆ.

ಈ ಕುರಿತು ಮಾಹಿತಿ ನೀಡಿದ ಯುಜಿಸಿ ಅಧ್ಯಕ್ಷ ಎಂ.ಜಗದೀಶ್‌ ಕುಮಾರ್‌, “ಎಪ್ರಿಲ್‌ನಲ್ಲಿ ಹೊರ ಡಿಸಿದ ಮಾರ್ಗ ಸೂಚಿಗಳ ಅನ್ವಯ ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿ ಗಳು ಭೌತಿಕ ಅಥವಾ ಮುಕ್ತ ಅಥವಾ ದೂರ ಶಿಕ್ಷಣ ಕ್ರಮದಲ್ಲಿ ಏಕಕಾಲದಲ್ಲಿ ಎರಡು ಪದವಿ ಗಳನ್ನು ಪಡೆಯಬಹುದು’ ಎಂದು ಹೇಳಿದರು.

“ಆದರೆ ಪಿಎಚ್‌ಡಿ ವಿದ್ಯಾರ್ಥಿಗಳು ಸಂಶೋಧನೆಯ ಬಗ್ಗೆ ಗಮನ ಹರಿಸಬೇಕಾಗುವುದರಿಂದ ಅವರಿಗೆ ಒಟ್ಟಿಗೆ ಎರಡೆರಡು ಪದವಿ ಮಾಡಲು ಅವಕಾಶವಿಲ್ಲ,’ ಎಂದು ಸ್ಪಷ್ಟಪಡಿಸಿದ್ದಾರೆ.

“ತರಗತಿ ಅವಧಿಗಳು ಒಂದಕ್ಕೊಂದು ತಿಕ್ಕಾಟ ವಾಗದಂತೆ ವಿದ್ಯಾರ್ಥಿಗಳ ಭೌತಿಕ ಕ್ರಮದಲ್ಲಿ ಎರಡು ಪದವಿಗಳನ್ನು ಪಡೆಯ ಬಹುದು. ಅಥವಾ ಒಂದು ಪದವಿ ಭೌತಿಕ, ಮತ್ತೂಂದು ಪದವಿ ದೂರ ಶಿಕ್ಷಣ ಕ್ರಮದಲ್ಲಿ ಪಡೆಯ ಬಹುದು ಅಥವಾ ಎರಡೂ ಪದವಿಗಳನ್ನು ದೂರ ಶಿಕ್ಷಣ ಕ್ರಮದಲ್ಲಿ ಪಡೆಯಬಹುದಾಗಿದೆ’ ಎಂದು ಎಂ. ಜಗದೀಶ್‌ ಕುಮಾರ್‌ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next