ಆ ರಾಜ್ಯದ ಜನತೆ ಆಕೆಯ ಹೋರಾಟವನ್ನೂ ಆಕೆ ಯಾವುದಕ್ಕಾಗಿ ನಿರಶನ ಸತ್ಯಾಗ್ರಹ ಕೈಗೊಂಡಿದ್ದರು ಎನ್ನುವುದನ್ನೂ ಮರೆತಿದ್ದಾರೆ ಎಂಬುದನ್ನು ಇದು ತೋರಿಸಿಕೊಟ್ಟಿದೆ.
Advertisement
ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಾಭವ ಅನುಭವಿಸಿರುವ ದೊಡ್ಡ ನಾಯಕರ ಬಗೆಗಷ್ಟೆ ಮಾತುಕತೆ, ಚರ್ಚೆಗಳಾಗುತ್ತಿವೆ. ಆದರೆ ಪಂಚರಾಜ್ಯ ಚುನಾವಣಾ ಫಲಿಧಿತಾಂಶಗಳನ್ನು ಅವಲೋಕಿಸುವ, ವಿಶ್ಲೇಷಿಸುವ ಸಂದರ್ಭದಲ್ಲಿ ಮಣಿಪುರದ ಅಭ್ಯರ್ಥಿಯೊಬ್ಬರ ಸೋಲನ್ನು ಗಮನಿಸದೆ ಇರಲು ಸಾಧ್ಯವಾಗುವುದಿಲ್ಲ. ಈ ಸೋಲು ಅತ್ಯಂತ ಗಣನೀಯವಾದದ್ದು. ಈ ಅಭ್ಯರ್ಥಿ ಮಣಿಪುರದ ಉಕ್ಕಿನ ಮಹಿಳೆಯೆಂದೇ ಕರೆಸಿಕೊಳ್ಳುತ್ತಿರುವ ಇರೋಮ್ ಶರ್ಮಿಳಾ ಚಾನು. ಈಕೆಯ ನೇತೃತ್ವದ ಪಕ್ಷವಾದ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಯನ್ಸ್‌ನ ಎಲ್ಲ ಅಭ್ಯರ್ಥಿಗಳೂ ಪರಾಭವಗೊಂಡಿದ್ದಾರೆ.
Related Articles
Advertisement
ಇರೋಮ್ ಶರ್ಮಿಳಾ ಮತ್ತು ಅವರ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪಕ್ಷ ಸಂಘಟನೆಯ ಕೊರತೆ ಹಾಗೂ ಹಣದ ಕೊರತೆ ಎಂದು ಹೇಳುವವರಿದ್ದಾರೆ. ಆದರೂ ಆಕೆಯ ಚುನಾವಣಾ ಪ್ರಚಾರದ ಮುಖ್ಯ ವಿಷಯವಾದ “ಸಶಸ್ತ್ರ ಪಡೆಗಳ ವಿಶೇಷಾಧಿಧಿಕಾರ ಕಾಯ್ದೆಯ ಹಿಂಪಡೆತ’ವೆನ್ನುವುದು ಗಂಭೀರ ವಿಷಯವೇ ಅಲ್ಲ ಎಂದು ಪರಿಗಣಿತವಾಗಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುವ ಸಂಗತಿ.
ಉನ್ನತರ ಸೋಲುಸಾರ್ವಜನಿಕ ಜೀವನದಲ್ಲಿನ ಅನೇಕ ಉನ್ನತ ವ್ಯಕ್ತಿತ್ವದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಆದರೆ ಜನರಿಗೆ ಪರಿಚಯವೇ ಇಲ್ಲದ ಮಂದಿ, ಕ್ರಿಮಿನಲ್ ಅಪರಾಧಿಧಧಿವೆಸಗಿದ ಮಂದಿ ಹಾಗೂ ಭ್ರಷ್ಟಾಚಾರ ಪರಾಯಣಧಿರೆನಿಸಿರುವ ವ್ಯಕ್ತಿಗಳು ಅನಾಯಾಸವಾಗಿ ಆಯ್ಕೆ ಹೊಂದಿದ್ದಾರೆ. ನಮ್ಮ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 1971ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಯ ಬೆಂಬಲದೊಂದಿಗೆ, ಪಕ್ಷೇತರ ಅಭ್ಯರ್ಥಿಯಾಗಿ ಮುಂಬಯಿಯ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಿ ಸೋಲುಂಧಿಡಿದ್ದರು. ಹಾಗೆ ಅವರು ಕಣಕ್ಕಿಳಿದ ಸಂದರ್ಭದಲ್ಲಿ ಆರ್.ಕೆ. ಲಕ್ಷ್ಮಣ್ ಅವರು “ಶಿವಸೇನೆಗೆ ದಕ್ಕಿದ ಸೇನಾಧಿಪತಿ’ ಎಂದು ಪ್ರತಿಕ್ರಿಯಿಸಿದ್ದು ನನಗೆ ನೆನಪಿದೆ. ಮೊನ್ನೆಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಇನ್ನೋರ್ವ ನಿವೃತ್ತ ಭೂಸೇನಾ ಪ್ರಮುಖ, ಜ| ಜೆ.ಜೆ. ಸಿಂಗ್ ಅವರು ಕಾಂಗ್ರೆಸಿಗ ಕ್ಯಾ| ಅಮಧಿರೀಂದರ್ ಸಿಂಗ್ ಅವರೆದುರು ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದಾರೆ. ಇನ್ನು, ಕೇವಲ ವಿನೋದಕ್ಕೆಂದು ಚುನಾವಣೆಗಳಲ್ಲಿ ಸ್ಪರ್ಧಿಸಿಧಿದವರಿದ್ದಾರೆ. ಇಂಥವರಲ್ಲೊಬ್ಬರು, ಬಂಗಾಲಿ ನಟ ಹರೀಂದ್ರನಾಥ ಚಟ್ಟೋಪಾಧ್ಯಾಯ. 1957ರ ಚುನಾವಣೆಯಲ್ಲಿ ಅವರು ತನಗೆ ಅಪರಿಚಿತವಾಗಿದ್ದ ಬೆಂಗಳೂರಿನಲ್ಲಿ ಕಮ್ಯೂನಿಸ್ಟರ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದರು. ಇವರ ಪ್ರಚಾರದ ಮರ್ಜಿ ಇತರ ಅಭ್ಯರ್ಥಿಗಳಿಗಿಂತ ತೀರಾ ಭಿನ್ನವಾಗಿತ್ತು. ತಮ್ಮ ಪ್ರಚಾರ ಸಭೆಗಳಲ್ಲಿ ಭಾಷಣಗಳ ಬದಲಿಗೆ ಅವರು ಹಾರ್ಮೋನಿಯಂ ಬಾರಿಸುತ್ತ ಹಿಂದಿ ಹಾಗೂ ಬಂಗಾಲಿ ಗೀತೆಗಳನ್ನು ಹಾಡುತ್ತಿದ್ದರು! ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೆಂಗಳೂರಿನ ಎರಡನೆಯ ಮೇಯರ್ ಎನ್. ಕೇಶವ ಅಯ್ಯಂಧಿಗಾರ್ ಅವರೆದುರು ಹೀಗೆ ಸ್ಪರ್ಧೆಗೆ ನಿಂತಿದ್ದ ಹರೀಂದ್ರನಾಥ್ ಸೋತದ್ದು ಅಚ್ಚರಿಯಲ್ಲ. ಬೆಂಗಳೂರಿನಲ್ಲಿ ಸ್ಪರ್ಧಿಸುವ ಬಗೆಗಿನ ಹರೀಂದ್ರನಾಥರ ನಿರ್ಧಾರ ಅಚ್ಚರಿ ಮೂಡಿಧಿಸಲು ಕಾರಣ ಅವರು ಪ್ರಥಮ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಕಮ್ಯೂನಿಸ್ಟ್‌ರ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಜಯವಾಡ ಕ್ಷೇತ್ರದಿಂದ ಸ್ಪರ್ಧಿಸಿದ್ದರು; ಆಯ್ಕೆಯೂ ಆಗಿದ್ದರು. ಬಹುಶಃ ಅವರು ರಾಜಕೀಯ ಜೀವನವನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಎಂ.ವಿ. ಕೃಷ್ಣಮೂರ್ತಿ ಅವರು 1980ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸಿದ್ದರು. ಅಮೆರಿಕನ್ ಶೈಲಿಯಲ್ಲಿ ಸಾವಿರಾರು ಜನರ ಕೈ ಕುಲುಕಿದ್ದರೆ ತಾನು ಗೆದ್ದು ಬರಬಲ್ಲೆ ಎಂದು ಅವರು ಬಹುಶಃ ತಿಳಿದುಕೊಂಡಿದ್ದರು. ಆದರೆ ಮತದಾರರು ಅವರಿಗೆ ನಿಜವಾಗಿ “ಕೈ’ ಕೊಟ್ಟರು. ಸತ್ಯಾಗ್ರಹಗಳ ಸೋಲು
ಇರೋಮ್ ಶರ್ಮಿಳಾ ಅವರ 16 ವರ್ಷಗಳ ಉಪವಾಸ ಕುರಿತಂತೆ ಅನೇಕರಿಗೆ, ತಮ್ಮದೇ ಆದ ಗುಮಾನಿಗಳಿದ್ದವು. ಉಪವಾಸ ಕುಳಿತಿದ್ದ ಸಂದರ್ಭಗಳಲ್ಲಿ ಆಕೆಯನ್ನು ಬಂಧಿಸಿ ಜೈಲಲ್ಲಿರಿಸಿ, ಅಲ್ಲಿಂದ ಇಂಫಾಲದ ಜವಾಹರಲಾಲ ನೆಹರೂ ವೈದ್ಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗುತ್ತಿತ್ತು. ವೈದ್ಯರ ಹಾಗೂ ನರ್ಸ್‌ಗಳ ಒಂದು ತಂಡ ಆಕೆಯ ಆರೋಗ್ಯ ನೋಡಿಕೊಳ್ಳುತ್ತಿತ್ತು. ಆಕೆಯ ಮೂಗಿಗೆ ನಳಿಕೆಗಳನ್ನು ತೂರಿಸಿ ಆಕೆಯ ದೇಹಕ್ಕೆ ಔಷಧಿಗಳನ್ನು ಹಾಗೂ ಪೋಷಕ ಆಹಾರಗಳನ್ನು ನೀಡಲಾಗುತ್ತಿತ್ತು. ಇಂಥ ವೈದ್ಯೋಪಚಾರ ಹಾಗೂ ಪೌಷ್ಟಿಕಾಂಶ ಭರಿತ ದ್ರವಾಹಾರಗಳು ಆಕೆಯನ್ನು ಜೀವಂತ ಇರಿಸಿದ್ದವು. ಶರ್ಮಿಳಾ ಯೋಗಾಭ್ಯಾಸ ಕೂಡ ಮಾಡುತ್ತಿದ್ದರು. ರಾಜಕಾರಣಿಗಳು ಹಾಗೂ ಢೋಂಗಿ ಹೋರಾಟಗಾರರು ಸಾಮಾನ್ಯವಾಗಿ ನಡೆಸುವ “ಆಮರಣಾಂತ’ ಉಪವಾಸ ಸತ್ಯಾಗ್ರಹಗಳ ಸತ್ಯಾಸತ್ಯತೆಗೆ ಮಹಾತ್ಮಾಗಾಂಧಿ ಪ್ರತಿಮೆಗಳೇ ಸಾಕ್ಷಿಯಾಗಿರುತ್ತವೆ. ಶರ್ಮಿಳಾರ ಉಪವಾಸ ಅತ್ಯಂತ ಕಟ್ಟುನಿಟ್ಟಿನದಾಗಿತ್ತು; ಸತ್ಯನಿಷ್ಠುರ ಗುಣದಿಂದ ಕೂಡಿತ್ತು. ತನ್ನ ನಿರಶನದ ಹದಿನಾರು ವರ್ಷಗಳ ಅವಧಿಯಲ್ಲಿ ಆಕೆ ಎಂದೂ ತನ್ನ ತಲೆಗೂದಲನ್ನು ಬಾಚಿಕೊಳ್ಳಲಿಲ್ಲ ಎಂದೂ ಹೇಳಲಾಗುತ್ತಿದೆ. ಹೆಚ್ಚೇನು, ಆಕೆ ಈ ಸುದೀರ್ಘ ಸತ್ಯಾಗ್ರಹದ ಅವಧಿಯಲ್ಲಿ ತನ್ನ ತಾಯಿಯನ್ನು ಭೇಟಿ ಮಾಡಿದ್ದು ಒಂದೇ ಬಾರಿ. ಈಗ ಹೊರಳಿ ನೋಡಿದರೆ ಶರ್ಮಿಳಾ ಅವರ ಈ ಸತ್ಯಾಗ್ರಹ ಪ್ರಯೋಜನಹೀನ, ವ್ಯರ್ಥ ಒದ್ದಾಟ ಎಂದು ಅನ್ನಿಸಬಹುದು. ಆಕೆ ತನ್ನ ಮೇಲೆ ತಾನೇ ಕೊಟ್ಟುಕೊಂಡ ಕ್ರೂರ ಹಿಂಸೆ ಕೇವಲ ಸುದ್ದಿ ಮಾಧ್ಯಮಗಳ ಹಾಗೂ ಕೆಲ ಮಾನವಾಧಿಕಾರ ಪ್ರತಿಧಿಪಾದಕರ ಗಮನವನ್ನಷ್ಟೇ ಸೆಳೆದಿರಬಹುದು. ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಅನೂರ್ಜಿತಗೊಳಿಸಬೇಕೆಂಬ ಆಕೆಯ ಆಗ್ರಹವನ್ನು ಮಣಿಪುರದ ಜನರು ಒಟ್ಟಾರೆಯಾಗಿ ಗಂಭೀರ ವಿಷಯವೆಂದು ಪರಿಗಣಿಸುವ ಗೋಜಿಗೆ ಹೋಗಿಲ್ಲದೇ ಇರಬಹುದು. 1970ರ ದಶಕದ ಆದಿಭಾಗದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಷ್ಟೇ ಇದು ಚುನಾವಣಾ ಪ್ರಚಾರದ ವಿಷಯವಾಗಿ ಪರಿಗಣಿತವಾಗಿತ್ತು. ಇಂಥ ವಿವಾದಿತ ವಿಷಯಗಳಲ್ಲಿನ ಶರ್ಮಿಳಾರ ನಿಲುವು ಬುದ್ಧಿಜೀವಿಗಳ ಚಿಂತನೆಯ ಮಟ್ಟದ್ದೆಂದೂ, ತಂಟೆ-ತಕರಾರಿನ ಅಥವಾ ಕಿಡಿಗೇಡಿತನದ ಇರಾದೆಯನ್ನೇ ಪ್ರಧಾನವಾಗಿ ಹೊಂದಿಧಿರುವ ಕೆಲ ಹೋರಾಟಗಾರರು ಆಕೆಗೆ ಈ ನಿಟ್ಟಿನಲ್ಲಿ ಪ್ರೇರಣೆ ನೀಡಿರುವ ಸಾಧ್ಯತೆಯಿದೆಯೆಂದೂ ಮಣಿಪುರದ ಜನತೆ ಭಾವಿಸಿರುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಹಾಗೆ ನೋಡಿದರೆ, ಆಮರಣಾಂತ ಉಪವಾಸದಂಥ ಘಟನೆಗಳು ವರ್ಷಗಳುರುಳಿದಂತೆ ತಮ್ಮ ಉದ್ದೇಶ ಸಾಧನೆಯಲ್ಲಿ ವಿಫಲವಾಗಿರುವುದನ್ನು ನೋಡುತ್ತಿದ್ದೇವೆ. ಇಂಥ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಸರಕಾರದ ಸ್ಪಂದನ, ನೇತಾತ್ಮಕವಾಗಿ ಪರಿಣಮಿಸಿರುವುದನ್ನು ಗಮನಿಸಬೇಕು. ಈ ಮಾತಿಗೆ ಅತ್ಯುತ್ತಮ ಉದಾಹರಣೆದರೆ, ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪಿಸಬೇಕೆಂದು ಆಗ್ರಹಿಸಿ 49 ದಿನಗಳ ಕಾಲ ಉಪವಾಸ ಕುಳಿತು ದೇಹತ್ಯಾಗ ಮಾಡಿದ ಪೊಟ್ಟಿ ಶ್ರೀರಾಮುಲು ಅವರ ಸತ್ಯಾಗ್ರಹ. ಕೇಂದ್ರದಲ್ಲಿದ್ದ ನೆಹರೂ ಸರಕಾರ 1953ರಲ್ಲಿ ಈ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮನ್ನಿಸಿತು. ಹೊಸ ರಾಜ್ಯದ ಉದಯವಾಗಿ, “ಆಂಧ್ರ ಕೇಸರಿ’ ಎಂಬ ಬಿರುದಿಗೆ ಮುಂದೆ ಪಾತ್ರರಾದ ಟಿ. ಪ್ರಕಾಶಂ ನೂತನ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ಇಂದು ತೆಲುಗರಿಗಾಗಿ ಎರಡು ರಾಜ್ಯಗಳಿವೆ- ತೆಲಂಗಾಣ ಮತ್ತು ಆಂಧ್ರಪ್ರದೇಶ. ಹಾಗಿದ್ದ ಮೇಲೆ ಪೊಟ್ಟಿ ಶ್ರೀರಾಮುಲು ಏನು ಸಾಧಿಸಿದಂತಾಯಿತು? ಟಿ. ಪ್ರಕಾಶಂ ಅವರನ್ನು ಇನ್ನೂ “ಆಂಧ್ರ ಕೇಸರಿ’ ಎಂದು ಕರೆಯುವುದರಲ್ಲಿ ಯಾವ ಅರ್ಥವಿದೆ?
ಇನ್ನೊಂದು ಪ್ರಖ್ಯಾತ ಆಮರಣಾಂತ ಉಪವಾಸ ಸತ್ಯಾಧಿಗ್ರಹವೆಂದರೆ, 1960ರ ದಶಕದ ಮಧ್ಯಭಾಗದಲ್ಲಿ ಅಕಾಲಿದಳ ನಾಯಕ ದರ್ಶನ್ ಸಿಂಗ್ ಫೆರುಮಾನ್ ಅವರು ನಡೆಸಿದ್ದ ಉಪವಾಸ ಸತ್ಯಾಗ್ರಹ. ದರ್ಶನ್ ಸಿಂಗ್ ಸತ್ಯಾಗ್ರಹದಲ್ಲೇ ಅಂತ್ಯ ಕಂಡರು; ಪಂಜಾಬ್ ಹಾಗೂ ಹರ್ಯಾಣ – ಹೀಗೆ ಎರಡು ಪ್ರತ್ಯೇಕ ರಾಜ್ಯಗಳ ಉದಯವಾಯಿತು. ಅರಕೆರೆ ಜಯರಾಮ್