ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಅಂತರಿಕ ಪೈಪೋಟಿಯಿದೆ. ಅವರು ಬರ್ತಾರೆ, ಇವರು ಬರ್ತಾರೆಂದು ಡಿ ಕೆ ಶಿವಕುಮಾರ್ ಹೇಳುವುದನ್ನು ನೋಡಿ ಸಿದ್ದರಾಮಯ್ಯ ಕೂಡಾ ಅಭದ್ರೆತೆಯಿಂದ ಅವರು ಬರ್ತಾರೆ ಇವರು ಬರ್ತಾರೆ ಎನ್ನುತ್ತಿದ್ದಾರೆ. ಇವರ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡುತ್ತಾರೆಯೇ ವಿನಹ, ಕಾಂಗ್ರೆಸ್ ಗೆ ಸೇರಲ್ಲ. ಬಿಜೆಪಿಯಿಂದದ ಅಲ್ಲಿಗೆ ಯಾರು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ನೆಲೆಯೇ ಇಲ್ಲ. ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಐದು ರಾಜ್ಯ ಚುನಾವಣೆಯಾದ ಮೇಲೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಅಪ್ರಸ್ತುತವಾಗಲಿದೆ. ಕರಿನೆರಳು ರಾಜ್ಯದ ಕಾಂಗ್ರೆಸ್ ಗೂ ಆಗುತ್ತದೆ. ಅವರವರ ಆಂತರಿಕ ಪೈಪೋಟಿ ಅಷ್ಟೇ, ಇದಕ್ಕೆ ಯಾವುದೇ ಸತ್ಯವೂ ಇಲ್ಲ, ವಾಸ್ತಾವಾಂಶವೂ ಇಲ್ಲ, ಭೂಮಿಕೆಯೂ ಇಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ
ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಅವರಿಂದ ಕೇಳಿ ವಿಚಾರ ಮಾಡುತ್ತೇನೆ ಎಂದ ಸಿಎಂ, ತಮ್ಮ ಜೊತೆ ಕೈ ಶಾಸಕರು ಸಂಪರ್ಕದಲ್ಲಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಅವರ ರೀತಿ ನಾನು ಬೇಜವ್ದಾರಿಯಾಗಿ ಮಾತನಾಡಲು ಹೋಗುವುದಿಲ್ಲ’ ಎಂದರು.
ಮುಂದಿನ ಚುನಾವಣೆಯಲ್ಲಿ ನಾವೇ ಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಅವರ ಸದಾಸೆ, ಯಾವಾಗಲೂ ಹಾಗೆ ಇರುತ್ತದೆ. ಇದೇನು ಹೊಸದೇನಲ್ಲ, ಯಾರಾದರೂ ಅತಂತ್ರವಾದರೆ ನಾವು ಸ್ವತಂತ್ರವಾಗುತ್ತೇವೆಂಬ ಆಸೆ ಅವರಿಗೆ ಮೊದಲಿನಂದಲೇ ಇದೆ ಟಾಂಗ್ ನೀಡಿದರು.
ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಶುದ್ಧ ಸುಳ್ಳು ಎಂದರು.