Advertisement
ಬಿಜೆಪಿ ಸುಳ್ಳನ್ನೇ ಹತ್ತು ಭಾರಿ ಹೇಳಿ ಸತ್ಯವೆಂದು ಬಿಂಬಿಸುತ್ತಿದೆ. ನಾವು ಸತ್ಯ ಹೇಳಿದರೂ ಜನರಿಗೆ ಮನವರಿಕೆ ಮಾಡಿಕೊಡಲು ಆಗುತ್ತಿಲ್ಲ. ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು. ಸತ್ಯವನ್ನ ಜನರಿಗೆ ತಲುಪುವಂತೆ ಮಾಡಬೇಕು ಎಂದರು.
ಎಂದು ಮನವಿ ಮಾಡಿದರು. ಎಲ್ಲರೂ ಸೇರಿ ಯಶಸ್ವಿಗೊಳಿಸೋಣ
Related Articles
Advertisement
ಫ್ರೀಡಂ ವಾಕ್ ಮಾಡಲು ತಿರ್ಮಾನ
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫ್ರೀಡಂ ವಾಕ್ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ ೭೫ ಕಿಮಿ ಪಥಸಂಚಲನ ಮಾಡಲು ನಿರ್ಧರಿಸಲಾಗಿದ್ದು, ತಿರಂಗಾ ಬಾವುಟಾ ಹಿಡಿದು ಪಥ ಸಂಚಲನ ನಡೆಸಲಾಗುತ್ತಿದ್ದು, ಅಗಸ್ಟ 15 ರಂದು ರಾಜ್ಯದ ಎಲ್ಲೆಡೆಯಿಂದ ಜನರನ್ನು ಆಹ್ವಾನಿಸಿ ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ವಿಶೇಷ ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಶಿವಪುರ, ವಿಧುರಾಶ್ವತ್ಥ ಬೆಳಗಾವಿಯಂತಹ ಐತಿಹಾಸಿಕ ಸ್ಥಳದಲ್ಲಿ ರಾಜ್ಯ ನಾಯಕರ ಭೇಟಿ ನೀಡಲಿದ್ದಾರೆ.
ಮುಂದಿನ ಹತ್ತು ತಿಂಗಳು ಕನಿಷ್ಠ 20 ದಿನ ವಹಿಸಿದ ಜವಾಬ್ದಾರಿ ನಿಭಾಯಿಸಬೇಕು. ಹೊಸಬರಿಗೆ ಅವಕಾಶ ಕೊಡುವಂತೆ ಸೂಚನೆ ನೀಡಿ, ಭಾರತದ 75 ವರ್ಷದ ಅಮೃತ ಮಹೋತ್ಸವ ಆಚರಣೆಗೆ ತೀರ್ಮಾನ ಮಾಡಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ 75 ಕಿಮೀ ಪಾದಯಾತ್ರೆ ಪ್ರತಿ ತಾಲೂಕು, ನಗರ, ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವಂತೆ ಸೂಚನೆ ನೀಡಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿಯವರೆಗೂ ಫ್ರೀಡಂ ರ್ಯಾಲಿ ನಡೆಯಲಿದೆ. ಆಗಸ್ಟ್15 ರಂದು ಒಂದು ಲಕ್ಷ ಜನರನ್ನ ಸೇರಿಸಿ ರ್ಯಾಲಿ ನಡೆಸಲಾಗುತ್ತಿದ್ದು, ಇದನ್ನ ಪಕ್ಷಾತೀತವಾಗಿ ಆಯೋಜಿಸಲಾಗಿದೆ ಎಂದರು.