ಹೊಸದಿಲ್ಲಿ: “ಯಾರು ಕೂಡ ಖಾಲಿ ಹೊಟ್ಟೆಯಲ್ಲಿ ನಿದ್ರೆ ಮಾಡದಂತೆ ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಆಹಾರಧಾನ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಅಲ್ಲದೇ, ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ವಲಸೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸಂಖ್ಯೆಯನ್ನು ನಮೂದಿಸಿರುವ ಹೊಸ ಚಾರ್ಟ್ ಸಲ್ಲಿಕೆ ಮಾಡುವಂತೆಯೂ ನ್ಯಾ| ಎಂ.ಆರ್.ಶಾ ನೇತೃತ್ವದ ನ್ಯಾಯಪೀಠ ನಿರ್ದೇಶನ ನೀಡಿದೆ.
ಕಟ್ಟಕಡೆಯ ವ್ಯಕ್ತಿಗೂ ಆಹಾರ ಒದಗಿಸುವುದು ಸರಕಾರದ ಕರ್ತವ್ಯ. ಕೊರೊನಾ ಅವಧಿಯಲ್ಲಿ ಜನ ರಿಗೆ ಆಹಾರ ಧಾನ್ಯ ತಲುಪುವಂತೆ ಕೇಂದ್ರ ಸರಕಾರ ನೋಡಿ ಕೊಂಡಿತ್ತು. ಅದು ಈಗಲೂ ಮುಂದುವರಿಯಬೇಕು. ಯಾರೂ ಕೂಡ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದೂ ನ್ಯಾಯಪೀಠ ಹೇಳಿದೆ.