Advertisement

ಹುಟ್ಟಿನಿಂದಲೇ ಯಾರೂ ಜ್ಞಾನಿಗಳಾಗಲ್ಲ

09:46 PM Feb 06, 2020 | Lakshmi GovindaRaj |

ಎಚ್‌.ಡಿ.ಕೋಟೆ: ಜಾತಿ ಮತ್ತು ಹುಟ್ಟಿನಿಂದ ಯಾರೂ ಜ್ಞಾನಿಗಳಾಗಲು ಸಾಧವಿಲ್ಲ. ಮನುಷ್ಯ ಮನುಷ್ಯನನ್ನು ದೂಷಿಸದೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರವರು ಮಾನವರಾಗುತ್ತಾರೆ. ಇನ್ನೊಬ್ಬರಿಗೆ ಕೆಡಕು ಬಯಸದೇ ಇರುವವರೇ ದೇವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ತಾಲೂಕಿನ ಮೊತ್ತ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ ಮತ್ತು ಕನಕದಾಸರ ನೂತನ ಪುತ್ಥಳಿ ಉದ್ಘಾಟಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಂಬೇಡ್ಕರ್‌ ಆದರ್ಶ ರೂಢಿಸಿಕೊಳ್ಳಿ: ದೇವರು ಸರ್ವಾಂತರ್ಯಾಮಿ ಗುಡಿಗೋಪುರ, ಮಸೀದಿ ಚರ್ಚುಗಳಲ್ಲಿ ದೇವರಿದ್ದಾನೆ. ಜನ ಮೌಡ್ಯಕ್ಕೆ ಬಲಿಯಾದೆ ವೈಜ್ಞಾನಿಕ ದೈವಿಕ ಭಾವನೆ ರೂಢಿಸಿಕೊಳ್ಳಬೇಕೆನ್ನುವ ಡಾ.ಬಿ.ಆರ್‌.ಅಂಬೇಡ್ಕರ್‌ ಆದರ್ಶ ರೂಢಿಸಿಕೊಳ್ಳಿ ಎಂದರು.

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಬಸವಣ್ಣ, ಶರಣರ ನುಡಿಯಂತೆ ಜನ ಕುಲಕುಲವೆಂದು ಹೊಡೆದಾಡಬೇಡಿ, ಇವನ್ಯಾರವ ಇವನಾರವ ಅನ್ನದೆ ಇವ ನಮ್ಮವ ಇವ ನಮ್ಮವ ಅನ್ನುವ ಭಾವನೆ ಬೆಳೆಸಿಕೊಂಡು ಮನುಷ್ಯನಲ್ಲಿನ ಕರುಣೆ, ಮಾನವೀಯತೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದ ಅವರು, ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಮೌಡ್ಯ ವಿರೋಧ ಕಾಯ್ದೆ ಜಾರಿಗೆ ತರುವ ಪ್ರಯತ್ನ ನಡೆದಿತ್ತು. ಈಗ ಅದು ಸರ್ಕಾರ ಅದನ್ನು ಜಾರಿಗೆ ತಂದಿರುವುದು ತೃಪ್ತಿ ತಂದಿದೆ ಎಂದರು.

ದಾರ್ಶನಿಕರ ಕೊಡುಗೆ ಅಪಾರ: ನಾನು ಅನ್ನುವ ಅಹಂ ದೂರ ಮಾಡಿ ಬಸವಣ್ಣನವರ ಕಾಯಕವೇ ಕೈಲಾಸ ಅನ್ನುವ ಸಿದ್ಧಾಂತ ಮೈಗೂಡಿಸಿಕೊಂಡು ಬದುಕಿದರೆ ಅದೇ ಧರ್ಮ, ಅದೇ ದೇವರು ಅನ್ನುವ ಸಲಹೆ ನೀಡಿದ ಅವರು, ಭಾಷಣದ ಉದ್ದಕ್ಕೂ ಬಸವಣ್ಣ, ಕನಕದಾಸರು ಸೇರಿದಂತೆ ದಾರ್ಶನಿಕರ ಸಮಾಜದ ಕೊಡುಗೆಗಳನ್ನು ಸ್ಮರಿಸಿಕೊಂಡರು.

ಜ್ಞಾನ ವೃದ್ಧಿಸಿಕೊಳ್ಳಬೇಕು: ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ಜ್ಞಾನಾರ್ಜನೆಗೆ ದೇವಾಲಯಗಳ ಬದಲು ಗ್ರಂಥಾಲಯಗಳ ಮೊರೆ ಹೋಗಬೇಕೆಂದು ಅಂಬೇಡ್ಕರ್‌ ಹೇಳಿದಂತೆ ಜನ ಗ್ರಂಥಾಲಯಗಳ ಮೊರೆ ಹೋಗಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಕರ್ನಾಟಕ ರಾಜ್ಯದ ಬಡಜನತೆ ಹಸಿವಿನಿಂದ ಮುಕ್ತರಾಗಬೇಕು ಅನ್ನುವ ಉದ್ದೇಶದಿಂದ 40 ವರ್ಷ ರಾಜಕಾರಣದಲ್ಲಿ ಕಳಂಕ ಇಲ್ಲದಂತೆ ಆಡಳಿತ ನಡೆದಿದ ವಿರೋಧ ಪಕ್ಷದ ನಾಯಕರೂ ಮಾಜಿ ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯದ ಜನತೆ ಹಸಿವಿನಿಂದ ಮುಕ್ತರಾಗಿದ್ದಾರೆ ಎಂದು ಹೇಳಿದರು.

Advertisement

ಅನುದಾನ ನಿಗದಿಪಡಿಬೇಕಿತ್ತು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅನುದಾನ ಬಿಡುಗಡೆಗೊಳಿಸಿದರು. ಆದರೆ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಪಂಡಗದವರ ಪರವಾಗಿ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ತಾಲೂಕಿನ ಶೈಕ್ಷಣಿಕ ದೃಷ್ಟಿಯಿಂದ ಪದವಿಕಾಲೇಜು ಆರಂಭದ ಜೊತೆಗೆ ವಿಶೇಷ ಅನುದಾನದ ಜೊತೆಯಲ್ಲಿ ಎಲ್ಲಾ ಸಮುದಾಯಗಳ ಭವನಗಳ ನಿರ್ಮಾಣಕ್ಕೆ ಸಹಕಾರ ನೀಡಿದ ಘಟನಾವಳಿಗಳ ಪುನರುಚ್ಚರಿಸಿದರು.

ತಾಲೂಕು ಅಭಿವೃದ್ಧಿ ಪಡಿಸುವ ಭರವಸೆ: ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಸಿದ್ದರಾಮಯ್ಯನವರ ವಿಶ್ವಾಸದ ಹಿನ್ನೆಲೆಯಲ್ಲಿ ತಾಲೂಕಿನ ಜನತೆ 22 ಸಾವಿರ ಮತಗಳನ್ನು ನೀಡಿ ನನ್ನ ಗೆಲುವಿಗೆ ಕಾರಣರಾಗಿದ್ದೀರಿ. ತಾಲೂಕಿನ ಸಮಗ್ರ ಅಭಿವೃದ್ಧಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ದೇವಸ್ಥಾನದ ನಿರ್ಮಾಣಕ್ಕೆ 5 ಲಕ್ಷ ಅನುದಾನ ನೀಡಿದ್ದು, ಮುಂದಿನ ಅಧಿಕಾರದ ಅವಧಿಯಲ್ಲಿ ಸರ್ಕಾರದಿಂದ ತಾಲೂಕಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ ತಾಲೂಕು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ನಿರ್ಮಾಣಮಾಡಿದ್ದ ಕನಕದಾಸರ ಪುತ್ಥಳಿ ಮತ್ತು ನೂತನ ಶನೇಶ್ವರ ದೇವಸ್ಥಾನವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು.

ಮಾಜಿ ಸಚಿವ ಎಚ್‌.ಸಿ.ಮಹದೇವಪ್ರಸಾದ್‌, ಶಿವಮಲ್ಲಪ್ಪ, ಸುಬ್ರಮಣ್ಯ, ಗೋಪಿ, ರುದ್ರಪ್ಪ, ಎಂ.ಸಿ.ದೊಡ್ಡನಾಯ್ಕ, ಪ್ರೇಮಸಾಗರ್‌, ರಾಜು, ಮಧುಕುಮಾರ್‌, ಎಚ್‌.ಸಿ.ನರಸಿಂಹಮೂರ್ತಿ, ಮರಿಗೌಡ, ಸೋಮಶೇಖರ್‌, ಶಿವಪ್ಪಕೋಟೆ, ಬಸವರಾಜು, ಮಾದಪ್ಪ, ಶಂಭುಲಿಂಗನಾಯ್ಕ, ನಯಿಮಾಸುಲ್ತಾನ, ಸ್ಟಾನಿಬ್ರಿಟೋ, ಗುರುಸ್ವಾಮಿ, ಛಾಯಾದೇವಿ, ರಾಜೇಗೌಡ, ಜಗನ್ನಾಥ್‌, ಸೀತಾರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next