Advertisement

ವೃತ್ತಿ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ: ಕಡಕೋಳ

04:10 PM Aug 31, 2018 | |

ಯಾದಗಿರಿ: ಸುದೀರ್ಘ‌ ವೃತ್ತಿ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಸಾರ್ವಜನಿಕರಿಗೆ ನ್ಯಾಯ ಒದಗಿಸಲು
ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುವುದರಿಂದ ವೃತ್ತಿ ಜೀವನ ತೃಪ್ತಿಕರವಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಯಾದಗಿರಿ ಪೊಲೀಸ್‌ ಅಧಿಧೀಕ್ಷಕರು ಹಾಗೂ ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ ಪ್ರಭಾರಿ ಪೊಲೀಸ್‌ ಅಧೀಕ್ಷಕ ಬಸವರಾಜ ಬಿ. ಕಡಕೋಳ ಮನದಾಳನ ಮಾತು ಬಿಚ್ಚಿಟ್ಟರು.

Advertisement

ನಗರದ ಎನ್‌ವಿಎಂ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ವಯೋನಿವೃತ್ತಿ ಹೊಂದಲಿರುವ ಪ್ರಯುಕ್ತ ತಮಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

1981ರಲ್ಲಿ ಜಿಲ್ಲೆಯ ಸೈದಾಪುರದಲ್ಲಿ ವೃತ್ತಿ ಜೀವನ ಆರಂಭಿಸಿದೆ. ಆಗ ಅಲ್ಲಿ ತಾಂಡಾ ನಿವಾಸಿಗಳ ಸಮಸ್ಯೆ ಹೆಚ್ಚಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳನ್ನು ಪರಿಹರಿಸಿದ್ದೇನೆ. 37 ವರ್ಷಗಳಲ್ಲಿ 26 ಬಾರಿ ವರ್ಗಾವಣೆಯಾಗಿದೆ. ಪೊಲೀಸ್‌ ಇಲಾಖೆಯ ಎಲ್ಲಾ ಶಾಖೆಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದೇನೆ. ದ್ವಿತೀಯ
ದರ್ಜೆ ಸಹಾಯಕರಿಂದ ಡಿವೈಎಸ್‌ಪಿ ಅಧಿಕಾರಿಗಳವರೆಗೂ ಎಲ್ಲರೂ ಸಹಕಾರ ನೀಡಿದ್ದಾರೆ.

ಮುಖ್ಯವಾಗಿ ಜನರ ಸಹಕಾರ ಕೂಡ ಇತ್ತು. ವೃತ್ತಿ ಆರಂಭಿಸಿದ ಜಿಲ್ಲೆಯಲ್ಲಿಯೇ ಈಗ ಬೀಳ್ಕೊಡುಗೆ ಸ್ವೀಕರಿಸುತ್ತಿರುವುದು ಖುಷಿ ನೀಡಿದೆ ಎಂದು ತಿಳಿಸಿದರು.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಅಯ್ಯಣಗೌಡ ಪಾಟೀಲ ಮಾತನಾಡಿ, ಲೋಕಾಯುಕ್ತ ಎಸ್‌ಪಿ ಬಸವರಾಜ ಕಡಕೋಳ ಅವರು ಸಾರ್ವಜನಿಕರ ಹಿತಕ್ಕಾಗಿ ವೃತ್ತಿಜೀವನ ಮುಡಿಪಾಗಿಟ್ಟಿದ್ದರು. ಯಾವುದೇ ಕಷ್ಟದ ಸಂದರ್ಭ ಇದ್ದರೂ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಇಲಾಖೆಗೆ ಗೌರವ ತಂದುಕೊಟ್ಟಿದ್ದಾರೆ. ತಮ್ಮ ಅಧೀನ ಅಧಿಕಾರಿಗಳನ್ನು ಸ್ನೇಹಿತರಂತೆ ಕಂಡು ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದರು.

Advertisement

 ಬೀದರ್‌ ಲೋಕಾಯುಕ್ತ ಡಿವೈಎಸ್‌ಪಿ ತಾಯಪ್ಪ ದೊಡಮನಿ ಮಾತನಾಡಿ, ಬಸವರಾಜ ಕಡಕೋಳ ಅವರು ಜನರ ಹಿತರಕ್ಷಣೆಯ ಕೆಲಸದಲ್ಲಿ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅವರ ನಿವೃತ್ತಿ ನಂತರವೂ ನಮಗೆ ಸಲಹೆ, ಸೂಚನೆ ನೀಡಲಿ ಎಂದು ಆಶಿಸಿದರು. 

ಕೊಪ್ಪಳ ಲೋಕಾಯುಕ್ತ ಪೊಲೀಸ್‌ ಇನ್‌ ಸ್ಪೆಕ್ಟರ್‌ ಹುಲಿಗೆಪ್ಪ, ಕಲಬುರಗಿ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಭಜಂತ್ರಿ, ನಗರಸಭೆ ಪೌರಾಯುಕ್ತರಾದ ಸಂಗಪ್ಪ ಉಪಾಸೆ, ಮುಖಂಡರಾದ ಮಹೀಂದ್ರಗೌಡ,
ಸಿದ್ರಾಮಪ್ಪಗೌಡ ಮಾಲಿಪಾಟೀಲ, ಬಾಬು ದೋಖಾ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಸೇರಿದಂತೆ ಅನೇಕರು ಶ್ರೀ ಬಸವರಾಜ ಬಿ. ಕಡಕೋಳ ಹಾಗೂ ಇವರ ಶ್ರೀಮತಿ ರಾಜೇಶ್ವರಿ ಬಿ. ಕಡಕೋಳ ಅವರನ್ನು ಸನ್ಮಾನಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿವೈಎಸ್‌ಪಿ ಪಾಂಡುರಂಗ, ಡಿವೈಎಸ್‌ಪಿ ಶೀಲವಂತ, ಎಸಿಬಿ ಡಿವೈಎಸ್‌ಪಿ ವೀರೇಶ ಕರಡಿಗುಡ್ಡ, ರಾಯಚೂರು ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಕಾಸ ಲಮಾಣಿ ಹಾಗೂ ಲೋಕಾಯುಕ್ತ ಪೊಲೀಸ್‌ ಸಿಬ್ಬಂದಿಗಳಾದ ಶಿವಶರಣಪ್ಪ, ಮಹ್ಮದ್‌ಗೌಸ್‌, ವಿಷ್ಣು, ರಾಮನಗೌಡ, ಹಣಮಂತರಾಯ, ನಾಗರಾಜ, ನೀಲಕಂಠ, ಶ್ರೀದೇವಿ, ರಾಜಾಸಾಬ್‌, ಚಂದಪ್ಪಗೌಡ ಇದ್ದರು.

ವಿದ್ಯಾರ್ಥಿನಿ ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪೊಲೀಸ್‌ ನಿರೀಕ್ಷಕರಾದ ಶಿವಾನಂದ ಗಾಣಿಗೇರ್‌ ಸ್ವಾಗತಿಸಿದರು. ಶಿಕ್ಷಕ ಉಮೇಶ ನರಗುಂದ ನಿರೂಪಿಸಿದರು. ಬೀದರ್‌ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಜುಕುಮಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next