Advertisement

Darshan ವಿಚಾರದಲ್ಲಿ ನನ್ನ ಹತ್ತಿರ ಯಾರೂ ಬಂದಿಲ್ಲ,ಬಿಜೆಪಿಯವರು ಸುಮ್ಮನೆ..: ಸಿದ್ದರಾಮಯ್ಯ

07:13 PM Jun 14, 2024 | Team Udayavani |

ಮೈಸೂರು: ‘ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಯಾರೂ ಬಂದಿಲ್ಲ. ಯಾವ ಪ್ರಭಾವಿಗಳೂ ಬಂದಿಲ್ಲ.ಬಂದಿದ್ದಾರೆ ಎಂದು ಸುದ್ದಿ ಆಗಿದೇ ಅದು ಸುದ್ದಿ ಅಷ್ಟೇ.ಬಿಜೆಪಿಯವರು ಸುಮ್ಮನೆ ಹೇಳುತ್ತಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ವಿಶೇಷ ವ್ಯವಸ್ಥೆ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ,’ಪೊಲೀಸರು ಯಾವ ಕಾರಣಕ್ಕೆ ಶಾಮಿಯಾನ ಹಾಕಿದ್ದಾರೆ ಗೊತ್ತಿಲ್ಲ. ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ.ಸಾರ್ವಜನಿಕರು ನನಗೆ ದೂರು ಕೊಟ್ಟಿಲ್ಲ.ಆ ಬಗ್ಗೆ ದೂರು ಬಂದಾಗ ನೋಡುತ್ತೇನೆ. ಸಾಮಾನ್ಯ ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತೇವೆ.ನಾವು ಕಾನೂನು ಪ್ರಕಾರ ಕಾರ್ಯ ಮಾಡುತ್ತೇವೆ, ಅದನ್ನು ಬಿಟ್ಟು ಏನೂ ಮಾಡುವುದಿಲ್ಲ’ ಎಂದರು.

ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ಸಿಕ್ಕ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಕೋರ್ಟ್ ನ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ.ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ, ಕಾಂಗ್ರೆಸ್ ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ.ಕಾನೂನು ರೀತಿ ಕೆಲಸ ಮಾಡುತ್ತೇವೆ.ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ. ವಿರೋಧ ಪಕ್ಷಗಳ ಎಲ್ಲಾ ಆರೋಪಗಳಿಗೆ ನಾನು ಉತ್ತರ ಕೊಡಬೇಕೆಂದೇನಿಲ್ಲ’ಎಂದರು.

ಗ್ಯಾರಂಟಿ ನಿಲ್ಲುವುದಿಲ್ಲ
ಮತಗಳಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ.ಯಾವುದೇ ಕಾರಣಕ್ಕೂ ಅದು ನಿಲ್ಲುವುದಿಲ್ಲ, ಪುನರ್ ಪರಿಶೀಲನೆ ಆಗುವುದಿಲ್ಲ.ಬಡವರಿಗಾಗಿ ಜಾರಿಗೆ ತಂದಿದ್ದೇವೆ‌ ಎಂದರು.

ನಮಗೆ ಲೋಕಸಭಾ ಸ್ಥಾನಗಳಲ್ಲಿ ಹಿನ್ನಡೆಯಾಗಿರಬಹುದು‌ ಆದರೆ ಮತಗಳಿಕೆ ವಿಚಾರದಲ್ಲಿ 13% ಹೆಚ್ಚಾಗಿದೆ.ಮೈಸೂರು ಸೋತಿರುವುದು ಸತ್ಯ. ಚಾಮರಾಜನಗರ ಗೆದಿದ್ದೇವೆ‌. ಸೋಲಿಗೆ ಕಾರಣ ಮಾಧ್ಯಮದವರಿಗೆ ಹೇಳುವುದಿಲ್ಲ.ಪಕ್ಷದ ಹೈಕಮಾಂಡ್ ಗೆ ನಾನು ಹೇಳುತ್ತೇನೆ. ರಾಜ್ಯದಲ್ಲಿ‌ 1 ಇದ್ದ ಸ್ಥಾನ ಹೆಚ್ಚಿಸಿ 9 ಸ್ಥಾನ ಗೆದಿದ್ದೇವೆ’ ಎಂದರು.

Advertisement

7ನೇ ವೇತನ ಆಯೋಗದ ಪ್ರಶ್ನೆ ಕೇಳುತ್ತಿದ್ದಂತೆ ಸಿಎಂ ಪ್ರತಿಕ್ರಿಯೆ ನೀಡದೆ ಹೊರಟರು. ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next