Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಗೌರವವಿದೆ. ಅವರವರ ನಂಬಿಕೆ ಪ್ರಕಾರ ಅವರವರು ದೇವರ ಆರಾಧನೆ ಮಾಡ್ತಾರೆ. ಹಿಂಗೆ ಹೇಳಿದ್ರೆ ವೋಟ್ ಬರುತ್ತೆ ಅಂತ ಪ್ರಧಾನಿ ಮೋದಿ ಮಾತಾಡ್ತಾರೆ. ಒಬ್ಬ ಪ್ರಧಾನಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಮೋದಿಯವರು ಚಿಲ್ಲರೆ ಮಾತನಾಡಿದ್ರೆ ಅವರಿಗೂ ಗೌರವ ಬರೋದಿಲ್ಲ, ನಮಗೂ ಗೌರವ ಬರೋದಿಲ್ಲ. ಕಾಂಗ್ರೆಸ್ ಅ ಧಿಕಾರಕ್ಕೆ ಬಂದ್ರೆ ಮಂಗಳ ಸೂತ್ರ ಇರೋಲ್ಲ. ನಿಮ್ಮ ಆಸ್ತಿ ಮುಸ್ಲಿಮರಿಗೆ ಹಂಚುತ್ತಾರೆ ಅನ್ನೋದನ್ನ ಬಿಡಬೇಕು ಎಂದು ಹೇಳಿದರು.
ಗಾಂಧಿ ಕುಟುಂಬ ಅಧಿಕಾರ ಬಿಟ್ಟು ಸುಮಾರು ವರ್ಷ ಕಳೆದಿದೆ. 1989ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರೂ ಮಂತ್ರಿಯಾಗಿಲ್ಲ. ಆದರೂ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬದ ಬಗ್ಗೆಯೇ ಮಾತನಾಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹಂತ-ಹಂತದ ಚುನಾವಣೆ ಮುಕ್ತಾಯವಾದಂತೆ ಇಂಡಿಯಾ ಒಕ್ಕೂಟ ಮೇಲಕ್ಕೇರುತ್ತಿದೆ. ದೇಶದ ಎಲ್ಲೆಡೆ ಒಳ್ಳೆಯ ವಾತಾವರಣ ಕಂಡು ಬರುತ್ತಿದೆ. ಇದು ಜನರ ಮಧ್ಯೆ ಮತ್ತು ಮೋದಿ ಮಧ್ಯೆ ನಡೆಯುತ್ತಿರುವ ಚುನಾವಣೆಯಾಗಿದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳ ದುರುಪಯೋಗದಿಂದ ಜನ ರೊಚ್ಚಿಗೆದ್ದಿದ್ದಾರೆ. ಜನ ರೊಚ್ಚಿಗೆದ್ದು ಮುಂದೆ ಬಂದು ಓಟ್ ಮಾಡುತ್ತಿದ್ದಾರೆ. ಹೀಗಾಗಿ ಇಂಡಿಯಾ ಒಕ್ಕೂಟಕ್ಕೆ ಬಹುಮತ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
Related Articles
ಬಿಜೆಪಿಗೆ ಅಧಿ ಕಾರ ತಡೆಯುವ ಸಾಮರ್ಥ್ಯ ಇಂಡಿಯಾ ಒಕ್ಕೂಟಕ್ಕೆ ಬಂದಿದೆ. ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಅಂತ ಹೇಳಲಾರೆವು. ಆ ರೀತಿಯ ಕನಸು ಮೋದಿಗೆ ಬಿದ್ದಿರಬಹುದು. ಅವರು ಚಾರಸೋ ಪಾರ್ ಅಂತಾರೆ. ಆದರೆ ನಾವು ವಾಸ್ತವಿಕತೆ ಹೊಂದಿದ್ದೇವೆ ಎಂದರು.
Advertisement
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತಾಗಿ ರಾಜ್ಯ ನಾಯಕರು ಮಾತನಾಡ್ತಾರೆ. ತಪ್ಪಿತಸ್ಥರು ಯಾರೇ ಇರಲಿ ಕಾನೂನಿನ ಪ್ರಕಾರ ಕ್ರಮ ಆಗಬೇಕು. ಅದು ಪ್ರಜ್ವಲ್ ಇರಲಿ, ಕೇಜ್ರಿವಾಲ್ ಸೆಕ್ರೆಟರಿ ಇರಲಿ, ಕಾನೂನು ಎಲ್ಲರಿಗೂ ಒಂದೇ ಎಂದು ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.