Advertisement

WFI elections; ಯಾರು ಗೆದ್ದರೂ ಅವರ ಕೆಲಸ ಮಾಡುತ್ತಾರೆ: ಬ್ರಿಜ್ ಭೂಷಣ್

07:18 PM Jul 31, 2023 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಚುನಾವಣೆಗಳಲ್ಲಿ ತಮ್ಮ ಕುಟುಂಬದ ಯಾವುದೇ ಸದಸ್ಯರು ಸ್ಪರ್ಧಿಸುವುದಿಲ್ಲ ಎಂದು ಭಾರತ ಕುಸ್ತಿ ಒಕ್ಕೂಟದ ನಿರ್ಗಮನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೋಮವಾರ ಹೇಳಿದ್ದಾರೆ.

Advertisement

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರು ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ 25 ರಾಜ್ಯಗಳ 22 ಘಟಕಗಳು ಭಾಗವಹಿಸಿದ್ದವು ಎಂದು ಹೇಳಿಕೊಂಡಿದ್ದರು. ಆಗಸ್ಟ್ 12 ರಂದು ನಡೆಯುವ ಫೆಡರೇಶನ್ ಚುನಾವಣೆಗೆ ವಿವಿಧ ಹುದ್ದೆಗಳಿಗೆ ತಮ್ಮ ಅಭ್ಯರ್ಥಿಗಳನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಹೇಳಿದ್ದರು. ತಮ್ಮ ಗುಂಪಿಗೆ 22 ರಾಜ್ಯ ಸಂಘಗಳ ಬೆಂಬಲವಿದೆ ಎಂದು ಪುನರುಚ್ಚರಿಸಿದ್ದಾರೆ.

WFI ಚುನಾವಣೆಗೆ ನಾಮನಿರ್ದೇಶನದ ಕೊನೆಯ ದಿನವಾದ ಸೋಮವಾರ ಬ್ರಿಜ್ ಭೂಷಣ್ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಕಚೇರಿಗೆ ಭೇಟಿ ನೀಡಿದರು. “ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 22 ರಾಜ್ಯ ಸಂಘಗಳ ಸದಸ್ಯರು ಇಲ್ಲಿದ್ದಾರೆ, ಅವರನ್ನು ಭೇಟಿಯಾಗಲು ಬಂದಿದ್ದೇನೆ. ಅವರೆಲ್ಲ ಈಗ ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಹೋಗುತ್ತಿದ್ದಾರೆ. ನನ್ನ ಕುಟುಂಬದಿಂದ ಯಾರೂ ಹೋಗುತ್ತಿಲ್ಲ. ಮೊದಲು ಚುನಾವಣೆ ನಡೆಯಲಿ ಮತ್ತು ಯಾರು ಗೆದ್ದರೂ ಅವರ ಕೆಲಸ ಮಾಡುತ್ತಾರೆ ”ಎಂದು ಹೇಳಿದರು.

ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಆರು ಪ್ರಮುಖ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದರು. ಬ್ರಿಜ್ ಭೂಷಣ್ ಅವರು 12 ವರ್ಷಗಳನ್ನು ಪೂರೈಸಿರುವ ಕಾರಣ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ಫೆಡರೇಶನ್ ಮುಖ್ಯಸ್ಥ ,ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಅನುಮತಿಸಲಾದ ಗರಿಷ್ಠ ಅವಧಿ ಮುಕ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next