Advertisement

ನೆಹರು, ಇಂದಿರಾ, ಸೋನಿಯಾ ಪ್ರಯತ್ನಿಸಿದ್ರೂ RSS ನ ಒಂದು ಕೂದಲು ಅಲ್ಲಾಡಿಸಲಾಗಿಲ್ಲ: ಈಶ್ವರಪ್ಪ

05:05 PM Sep 29, 2022 | keerthan |

ಶಿವಮೊಗ್ಗ: ಆರ್ ಎಸ್ಎಸ್ ಬ್ಯಾನ್ ಮಾಡಲು ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯ ಕೈಯಲ್ಲೇ ಆಗಿಲ್ಲ. ಅವರೆಲ್ಲಾ ಪ್ರಯತ್ನ ಮಾಡಿದರೂ ಆರ್ ಎಸ್ಎಸ್ ನ ಒಂದು ಕೂದಲೂ ಅಲ್ಲಾಡಿಸಲಾಗಿಲ್ಲ. ರಾಷ್ಟ್ರಭಕ್ತ ಸಂಘಟನೆ ಆರ್ ಎಸ್ಎಸ್ ಬ್ಯಾನ್ ಮಾಡಲು ಕಾಂಗ್ರೆಸ್ ನ ಯಾವ ಹುಳಕ್ಕೂ ಆಗುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐನ್ನು ಬೆಂಬಲಿಸುವ ಇವರು ಜಿನ್ನಾ ಸಂತತಿ. ಕನಕದಾಸರ ಸಂತತಿ ಅಲ್ಲ. ಜಿನ್ನಾ ಹಾಗೂ ಸಿದ್ದರಾಮಯ್ಯ ಬ್ಲಡ್ ಒಂದೇ. ನಮ್ಮದು ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಬ್ಲಡ್. ಆದಕ್ಕೆ ಪಿಎಫ್ಐ ಬಗ್ಗೆ ಪ್ರೀತಿ ಮಾಡಿ, ಆರ್ ಎಸ್ಎಸ್ ದ್ವೇಷ ಮಾಡುತ್ತಾರೆ. ಆರ್ ಎಸ್ಎಸ್ ದ್ವೇಷ ಮಾಡಿದ ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್ ನಿರ್ನಾಮ ಆಗಿದೆ. ರಾಜ್ಯದಲ್ಲೂ ಕೂಡ ಕುಂಟುತ್ತಾ ವಿರೋಧ ಪಕ್ಷದಲ್ಲಿ ಕೂತಿದೆ ಎಂದರು.

ಇದನ್ನೂ ಓದಿ:ಡಿಪ್ರೆಶನ್ ನಲ್ಲಿದ್ದ ದಿನೇಶ್ ಕಾರ್ತಿಕ್ ‘ಮಿಸ್ಟರ್ ಫಿನಿಶರ್’ ಆದ ಕಥೆ; ಇದು ಲವ್ ಸ್ಟೋರಿಯಲ್ಲ

ನಮ್ಮ ರಾಜ್ಯಾಧ್ಯಕ್ಷರಿಗೆ ವಿದೂಷಕನೆಂದು ಕರೆಯುತ್ತಾರೆ. ಆದರೆ, ಇದೇ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಪಕ್ಷಕ್ಕೆ ವಿಲನ್ ಆಗಿದ್ದಾರೆ. ಪಕ್ಷ ಮಾತ್ರವಲ್ಲದೇ ರಾಜ್ಯ ಹಾಗೂ ದೇಶಕ್ಕೂ ಸಿದ್ದರಾಮಯ್ಯ ವಿಲನ್. ಕಟೀಲು ವಿದೂಷಕ ಅಲ್ಲ ನಮ್ಮ ಪಕ್ಷವನ್ನು ಕಟ್ಟುತ್ತಿರುವ ನೇತಾರ ಅವರು. ಡಿ.ಕೆ.ಶಿವಕುಮಾರ್ ಗೂ ಸಿದ್ದು ಕೂಡ ವಿಲನ್ ಆಗಿದ್ದಾರೆ. ಆರ್ ಎಸ್ ಎಸ್ ಹಿಂದೂಗಳನ್ನು ಸಂಘಟನೆ ಮಾಡುತ್ತಿದೆ. ಸಿದ್ದರಾಮಯ್ಯ ಹಿಂದೂಗಳು ಓಟು ಬೇಡ ಎಂದು ಹೇಳಲಿ ನೋಡೋಣ. ಬರೀ ಮುಸ್ಲಿಂ ಓಟ್ ನಲ್ಲೇ ನಾನು ಇರುತ್ತೇನೆಂದು ಹೇಳಲಿ. ರಾಷ್ಟ್ರಭಕ್ತ ಮುಸಲ್ಮಾನರು ಕೂಡ ಸಿದ್ದರಾಮಯ್ಯ ಮಾತು ಒಪ್ಪಲ್ಲ. ಅನೇಕ ಮುಸಲ್ಮಾನರು ಕೂಡ ಆರ್ಎಸ್ ಎಸ್ ಕಚೇರಿ, ಶಾಖೆಗೆ ಬರ್ತಾರೆ. ರಾಷ್ಟ್ರದ್ರೋಹಿಗಳು ಪಿಎಫ್ಐ ಜೊತೆ ಹೋಗುತ್ತಾರೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next