Advertisement

ಕಾಂಗ್ರೆಸ್‌ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ

06:25 AM Aug 14, 2018 | |

ಬೀದರ: “ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುಗಿಸುವುದಾಗಲಿ, ಅಳಿಸುವುದಾಗಲಿ ಯಾರಿಂದಲೂ ಸಾಧ್ಯವಿಲ್ಲ’ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷದಿಂದ ಏರ್ಪಡಿಸಲಾಗಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಳಿಸುತ್ತೇವೆ ಎಂದು ಬಿಜೆಪಿ ನಾಯಕರು ಹೊರಟಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ಮುಂಬರುವ ಲೋಕಸಭೆ ಚುನಾವಣೆ ಕಾಂಗ್ರೆಸ್‌ ಪಕ್ಷಕ್ಕೆ ಮಹತ್ವದ್ದಾಗಿದೆ. ಮೂರು ವಿಷಯಗಳಿಗಾಗಿ ದೇಶದ ಜನರು ಕಾಂಗ್ರೆಸ್‌ ಬೆಂಬಲಿಸಬೇಕಾಗಿದೆ. ಸಂವಿಧಾನದ ರಕ್ಷಣೆ, ಪ್ರಜಾತಂತ್ರ ವ್ಯವಸ್ಥೆ ಉಳಿವು ಹಾಗೂ ಜಾತ್ಯತೀತವಾಗಿ ಎಲ್ಲರೂ ಏಕತೆಯಿಂದ ಇರಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಬೇಕು ಎಂದರು.

371(ಜೆ) ಕಲಂ ಅನುಷ್ಠಾನಕ್ಕೆ ಶ್ರಮಿಸಿದ ರಾಹುಲ್‌ ಗಾಂಧಿ ಅವರ ಋಣ ಈ ಭಾಗದವರ ಮೇಲಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಹೈಕ ಭಾಗದ ಐದು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ , ಕೇಂದ್ರ ಸರ್ಕಾರ ಹೇಗೆ ದೇಶದ ಹಣ ಲೂಟಿ ಮಾಡುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ದೇಶದ ಸ್ಥಿತಿಗತಿ ಪ್ರಜೆಗಳಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಆದರೆ, ರಾಹುಲ್‌ ಅವರ ಪ್ರಶ್ನೆಗಳಿಗೆ ಇಂದಿಗೂ ಉತ್ತರ ನೀಡಿಲ್ಲ ಎಂದರು.

ರಾಹುಲ್‌ ಪ್ರಧಾನಿ ಖಚಿತ: ಸಿದ್ದರಾಮಯ್ಯ
ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಗೆಲುವು ಸಾಧಿಸಿ ಪ್ರಧಾನಿಯಾಗುತ್ತಾರೆ. ಅಲ್ಲದೇ, ರೈತರ ಸಾಲ ಮನ್ನಾ ಕೂಡ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ. ಅದೇ ರೀತಿ ರಾಹುಲ್‌ ಕೂಡ ನುಡಿದಂತೆ ನಡೆಯುವವರಾಗಿದ್ದಾರೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರ ಸಂಕಷ್ಟ ಅರಿತು ಸಹಕಾರ ಬ್ಯಾಂಕ್‌ಗಳ ಸಾಲಮನ್ನಾ ಮಾಡುವುದಾಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದಲ್ಲಿ ಕೂಡ ಅರ್ಧಭಾಗ ರಾಜ್ಯ ಸರ್ಕಾರ ಉಳಿದ ಅರ್ಧಭಾಗ ಕೇಂದ್ರದಿಂದ ನೀಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ಆದರೂ ಮೋದಿ ಅವರು ಒಂದು ಪೈಸೆ ನೀಡಲು ಒಪ್ಪಿಲ್ಲ ಎಂದರು.

ಲೋಕಸಭೆಯಲ್ಲಿ ರಾಹುಲ್‌ ಗಾಂ ಧಿ ಮಾತನಾಡಿ ಮೋದಿ ಅವರು ದೇಶದ ಚೌಕಿದಾರರಾಗಿ ಕೆಲಸ ಮಾಡದೇ ದೇಶದ ಭ್ರಷ್ಟಾಚಾರದ ಭಾಗಿದಾರಾಗಿದ್ದಾರೆ ಎಂದು ಆರೋಪಿಸಿದರು ಕೂಡ ಅದಕ್ಕೆ ಇಂದಿಗೂ ನರೇಂದ್ರ ಮೋದಿ ಉತ್ತರ ನೀಡಿಲ್ಲ ಎಂದರು.

Advertisement

ಚುನಾವಣೆ ಸಂದರ್ಭದಲ್ಲಿ ಅನೇಕ ಭರವಸೆ ನೀಡುವ ಮೂಲಕ ಅ ಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ, ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಬಿಜೆಪಿಯ 17 ಸಂಸದರು ಇದ್ದಾರೆ. ಸದನದಲ್ಲಿ ಒಮ್ಮೆಯಾದರೂ ಕರ್ನಾಟಕದ ಅಭಿವೃದ್ಧಿ ಕುರಿತು ಮಾತಾಡಿದ್ದಾರೆಯೇ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿ°ಸಿದರೆ ಇಂದಿಗೂ ಉತ್ತರ ಬಂದಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next