ಕೊರಟಗೆರೆ : ಕರ್ನಾಟಕ ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ, ಬಹಳ ಶ್ರಮದಿಂದ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕರ್ನಾಟಕ ರಚನೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರದೊ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನು ಒಡೆಯುವ ಕೆಲಸ ಯಾರೂ ಮಾಡಬಾರದು. ನಮ್ಮ ದೇಶದ ಭದ್ರತೆ ಬಹಳ ಮುಖ್ಯ. ಗಡಿಯಲ್ಲಿ ಸೈನಿಕರು ಪ್ರಾಣವನ್ನೇ ಕೊಟ್ಟು ಹೋರಾಡುತ್ತಾರೆ ಅಂತಹ ವಿಚಾರದಲ್ಲಿ ನಾವು ಹೊಂದಾಣಿಕೆಯಾಗಬಾರದು ಎಂದರು.
ಯುವಕರು 4 ವರ್ಷ ಕಳೆದ ಮೇಲೆ ಏನು ಎಂಬುದನ್ನು ಯೋಚನೆ ಮಾಡಬೇಕಿದೆ ಎಂದು ಅಗ್ನಿ ಪಥ ಯೋಜನೆ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.
ಇದನ್ನೂ ಓದಿ : 2024ರ ಚುನಾವಣೆ ಬಳಿಕ ರಾಜ್ಯ ವಿಭಜನೆ ಬಗ್ಗೆ ಪ್ರಧಾನಿ ಚಿಂತನೆ : ಸಚಿವ ಉಮೇಶ್ ಕತ್ತಿ
Related Articles
ವರಷ್ಠರು ತಿರ್ಮಾನ ಮಾಡಿದರೆ ನಮ್ಮ ಪಕ್ಷಕ್ಕೆ ಜೆಡಿಎಸ್ ನಿಂದ ಉಚ್ಚಾಟನೆ ಆಗಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದರು.