Advertisement

ತೈಲ ಸೋರಿಕೆಯಲ್ಲ, ಟಾರ್‌ ಬಾಲ್‌ ವಿಸರ್ಜನೆ

11:23 PM Apr 27, 2019 | Team Udayavani |

ಮಂಗಳೂರು: ಅರೇಬಿಯನ್‌ ಸಮುದ್ರದಲ್ಲಿ ಅಥವಾ ಪಶ್ಚಿಮ ಕರಾವಳಿಯಲ್ಲಿ ತೈಲ ಸೋರಿಕೆಯಾಗಿಲ್ಲ. ಹಡಗು ಟ್ಯಾಂಕರ್‌ಗಳಿಂದ ವಿಸರ್ಜಿಸಲ್ಪಟ್ಟ ವಸ್ತುಗಳಿಂದ ಟಾರ್‌ ಬಾಲ್‌ಗ‌ಳು ಉಂಟಾಗಿ ಸಮುದ್ರ ತೀರಕ್ಕೆ ಬಂದು ಸೇರುತ್ತಿವೆ ಎಂದು ಹೇಳಲಾಗಿದೆ.

Advertisement

ಅರೇಬಿಯನ್‌ ಸಮುದ್ರದಲ್ಲಿ ತೈಲ ಸೋರಿಕೆಯಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಗೋವಾ ಕರಾವಳಿ ತೀರದಲ್ಲಿ ಹಡಗುಗಳು ಮತ್ತು ಅಂತಾರಾಷ್ಟ್ರೀಯ ತೈಲ ಟ್ಯಾಂಕರ್‌ಗಳು ಪರ್ಷಿಯಾದ ಕೊಲ್ಲಿಯ ಕಡೆಗೆ ಸಂಚಾರ ಮಾಡುವ ಸಂದರ್ಭ ಹಡಗುಗಳಿಂದ ಬೀಳುವ ತೈಲ ಜಿಡ್ಡಿನ ಅಂಶ 24 ಗಂಟೆಗಳಲ್ಲಿ ಸಮುದ್ರದ ತೀವ್ರತೆಯನ್ನು ಅವಲಂಬಿಸಿ ಡಾಂಬರು ಉಂಡೆಗಳಾಗಿ ಮಾರ್ಪಾಡಾಗುತ್ತವೆ.

ಬಳಿಕ, ಗಾಳಿಯ ಮೂಲಕ ಸಮುದ್ರದ ತೀರ ಸೇರುತ್ತವೆ ಎಂದು ವರದಿ ತಿಳಿಸಿದೆ. ಮುಂಗಾರು ಸಂದರ್ಭ ಕರಾವಳಿ ಕಡೆ ಗಾಳಿಯ ತೀವ್ರತೆ ಇರುವುದರಿಂದ ಕರ್ನಾಟಕದ ತೀರದಲ್ಲಿ ಇದು ಬಂದು ಸೇರುತ್ತಿದೆ ಎಂದು ಎನ್‌ಐಒ ವಿಜ್ಞಾನಿ ಎ.ಕೆ.ಸರನ್‌ ವರದಿಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಕರಾವಳಿ, ಪೂರ್ವ ಕರಾವಳಿಗಿಂತ ಟಾರ್‌ ಚೆಂಡಿನ ಶೇಖರಣೆಗೆ ಹೆಚ್ಚು ಅನುಕೂಲಕರವಾಗಿದೆ. ಗುಜರಾತ್‌ ಮತ್ತು ಕರ್ನಾಟಕದ ಕರಾವಳಿಯಲ್ಲಿ ಸೂರತ್‌ ಮತ್ತು ಪೊರ್‌ಬಂದರ್‌ ಬಳಿ ಇಂತಹ ನಿಕ್ಷೇಪಗಳು ಕಂಡು ಬರುತ್ತವೆ. ಗೊಯಾನ್‌ ಕಡಲತೀರಗಳಲ್ಲಿ ಇದರ ಶೇಖರಣೆ ಹೆಚ್ಚು ಎಂದು ವರದಿ ತಿಳಿಸಿದೆ. ಈ ಮಧ್ಯೆ, ಕರಾವಳಿ ತೀರದಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next