Advertisement
ಬೇಸಗೆ ರಜೆಯ ಪ್ರಯುಕ್ತ ಪ್ರವಾಸಗಳು ಹೆಚ್ಚಾಗಿವೆ. ಜನರು ಕೊರೊನಾ ಮುನ್ನೆಚ್ಚರಿಕ ನಿಯಮಗಳನ್ನು ಮರೆತಿದ್ದಾರೆ. ಮುನ್ನೆಚ್ಚರಿಕ ಡೋಸ್ ಲಸಿಕೆಯ ಬಗ್ಗೆಯೂ ಹೆಚ್ಚು ಗಮನ ಹರಿಸಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸೋಂಕು ಹೆಚ್ಚಳವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
Related Articles
Advertisement
ಬೂಸ್ಟರ್ ಲಸಿಕೆ ಪಡೆಯಲು ನಿರಾಸಕ್ತಿಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಮುನ್ನೆ ಚ್ಚರಿಕ ಅಥವಾ ಬೂಸ್ಟರ್ ಡೋಸ್ ಪಡೆಯಲು ದೊಡ್ಡ ದೊಡ್ಡ ರಾಜ್ಯಗಳ ಜನತೆ ನಿರಾಸಕ್ತಿ ವಹಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಎ. 10ರಿಂದ ಅರ್ಹರಿಗೆ ಬೂಸ್ಟರ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಜನವರಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡು ಅನಂತರ ಹೆಚ್ಚು ಅಪಾಯ ಮಾಡದೇ ಕಡಿಮೆ ಯಾಗಿತ್ತು. ಇದೆಲ್ಲದರ ಜತೆಗೆ ಕೊರೊನಾ ಬಂದು ಹೋದವರಿಗೆ ಬೂಸ್ಟರ್ ಡೋಸ್ ಬೇಕಾಗಿಲ್ಲ ಎಂಬ ಜನರಲ್ಲಿನ ನಂಬಿಕೆಯಿಂದಾಗಿ ಜನ ಲಸಿಕೆ ಪಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಮೊದಲ ಲಸಿಕೆಯನ್ನು ಶೇ.110.43, ಎರಡನೇ ಲಸಿಕೆಯನ್ನು ಶೇ. 106.88 ಮತ್ತು ಬೂಸ್ಟರ್ ಲಸಿಕೆಯನ್ನು ಶೇ.5.30ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ದೊಡ್ಡ ರಾಜ್ಯ ಗಳಿಗೆ ಹೋಲಿಕೆ ಮಾಡಿದರೆ, ಪುಟ್ಟ ರಾಜ್ಯಗಳೇ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪಡೆದಿವೆ. ಅಮೆರಿಕದಲ್ಲಿ ಭಾರತದ ಆರ್ಥಿಕತೆ ಪ್ರಸ್ತಾಪ
ಕೊರೊನಾದ ಎರಡು ಅಲೆಗಳಿಗೆ ತುತ್ತಾಗಿ ದ್ದರೂ ಆನಂತರದ ಕಾಲಘಟ್ಟದಲ್ಲಿ ಭಾರ ತೀಯ ಆರ್ಥಿಕತೆ ಪುಟಿದೆದ್ದು ಚೇತರಿಕೆಯತ್ತ ಸಾಗಿದೆ ಎಂದು ಅಮೆರಿಕದ ಸಂಸತ್ತಿಗೆ, ಅಮೆ ರಿ ಕದ ಖಜಾನೆ ಇಲಾಖೆಯಿಂದ ಸಲ್ಲಿಸಲಾ ಗಿರುವ ವರದಿಯೊಂದರಲ್ಲಿ ಉಲ್ಲೇಖೀಸಲಾ ಗಿದೆ. 2021ರ ಮಧ್ಯಭಾಗದಲ್ಲಿ ಭಾರತವು ಕೊರೊನಾದ ಎರಡನೇ ಅಲೆಗೆ ಅಕ್ಷರಶಃ ತತ್ತ ರಿಸಿತ್ತು. ಅದರಿಂದ ದೇಶದ ಹಣಕಾಸು ಪರಿ ಸ್ಥಿತಿ ದಿಕ್ಕೆಟ್ಟಿತ್ತು. ಆದರೆ ಬಹುಬೇಗನೇ ಅದರಿಂದ ಚೇತರಿಸಿಕೊಂಡ ಭಾರತದ ಆರ್ಥಿಕತೆ ಏರುಗತಿ ಯತ್ತ ಸಾಗಿದ್ದು ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದೆ. ಅದರ ಜೊತೆಗೆ, 2021ರ ಅಂತ್ಯದ ವೇಳೆಗೆ ದೇಶದ ಶೇ. 40ರಷ್ಟು ಭಾರತೀಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧವೂ ಭಾರತ ಸೆಡ್ಡು ಹೊಡೆದು ನಿಂತಿತು ಎಂದು ಹೇಳಲಾಗಿದೆ. ಚೀನದಲ್ಲಿ ಕೊರೊನಾ ಸ್ಫೋಟ
ಕೊರೊನಾ ಉಗಮ ಸ್ಥಾನವಾದ ಚೀನದಲ್ಲಿ ಮತ್ತೆ ಕೊರೊನಾ ಭುಗಿಲೆದ್ದಿದೆ. ರಾಜಧಾನಿ ಬೀಜಿಂಗ್ ಹಾಗೂ ವಾಣಿಜ್ಯ ನಗರಿಯಾದ ಶಾಂಘೈಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾ ಗುತ್ತಿವೆ. ಹಾಗಾಗಿ ಆ ಎರಡೂ ನಗರಗಳಲ್ಲಿ ವ್ಯಾಪಕ ಪರೀಕ್ಷ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಬೀಜಿಂಗ್ ಮಹಾನಗರ ಪಾಲಿಕೆಯ ವಕ್ತಾರ ಕ್ಸು ಹೆಜಿಯನ್, ಹೆವೆನ್ ಸೂಪರ್ ಮಾರ್ಕೆಟ್ ಪ್ರಾಂತದಲ್ಲಿ ಹೆಚ್ಚು ಸೋಂಕು ಕಾಣಸಿಕೊಂಡಿದೆ. ಹಾಗಾಗಿ, ಸುತ್ತಲಿನ ಪ್ರಾಂತಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡ ಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು ಅಲ್ಲಿಂದ ಚೀನಕ್ಕೆ ಬೀಸುತ್ತಿರುವ ಗಾಳಿ ಯಿಂದಾಗಿ ಸೋಂಕು ಕೂಡ ಆಗಮಿಸುತ್ತಿದೆ ಎಂದು ಚೀನ ಸರಕಾರದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.