Advertisement

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

10:04 PM Oct 25, 2021 | Team Udayavani |

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರೀತಿ ಪಾತ್ರರಿಗೆ ಮೊಬೈಲ್‌, ಟಿವಿ ಗಿಫ್ಟ್ ಕೊಡುತ್ತಿದ್ದ ಜನರಿಗೆ ಈ ವರ್ಷ ನಿರಾಸೆಯಾಗಿದೆ. ಜಾಗತಿಕವಾಗಿ ಉಂಟಾಗಿರುವ ಚಿಪ್‌ ಕೊರತೆಯಿಂದಾಗಿ ಎಲ್ಲ ಕಂಪನಿಗಳ ಮೊಬೈಲ್‌, ಟಿವಿಗಳು “ಔಟ್‌ ಆಫ್ ಸ್ಟಾಕ್‌’ ಆಗಿವೆ.

Advertisement

ಎಲೆಕ್ಟ್ರಾನಿಕ್‌ ಡಿವೈಸ್‌ಗಳ ವಾರ್ಷಿಕ ವಹಿವಾಟಿನ ಸರಿ ಸುಮಾರು ಶೇ. 30-35ರಷ್ಟು ದೀಪಾವಳಿಯ ಸಮಯದಲ್ಲೇ ನಡೆಯುತ್ತದೆ. ಅದಕ್ಕೆಂದೇ ಎಲ್ಲ ಕಂಪನಿಗಳು ಮತ್ತು ಆನ್‌ಲೈನ್‌ ಮಾರುಕಟ್ಟೆಗಳು ವಿಶೇಷ ರಿಯಾಯಿತಿ ನೀಡುತ್ತವೆ. ಆದರೆ ಈ ವರ್ಷ ಎಲ್ಲೆಡೆ ಔಟ್‌ ಆಫ್ ಸ್ಟಾಕ್‌ ಬೋರ್ಡ್‌ಗಳು ಕಾಣಿಸಿಕೊಂಡಿದೆ. ಬೇಡಿಕೆಗಿಂತ ಶೇ. 15-30 ಕಡಿಮೆ ಸ್ಟಾಕ್‌ ಇದ್ದು, ಸಂಸ್ಥೆಗಳಿಗೆ ಭಾರೀ ಹೊಡೆತವಾಗಿದೆ ಎನ್ನುತ್ತಿವೆ ಆ್ಯಪಲ್‌, ಸ್ಯಾಮ್‌ಸಂಗ್‌, ಎಲ್‌ಜಿ, ಕ್ಸಿಯೋಮಿಯಂತಹ ಸಂಸ್ಥೆಗಳು.

ಡೆಲಿವರಿಗೆ ಬೇಕು ತಿಂಗಳು:
ಚಿಪ್‌ ಸಮಸ್ಯೆಯಿಂದಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ಫೋನುಗಳೂ ಗ್ರಾಹಕರಿಗೆ ಲಭ್ಯವಾಗದಂತಾಗಿದೆ. ಅದರಲ್ಲೂ ಪ್ರಮುಖವಾಗಿ ಆ್ಯಪಲ್‌ ಸಂಸ್ಥೆಯ ಐಫೋನ್‌ ಮೇಲೆ ಹೆಚ್ಚಿನ ಪರಿಣಾಮ ಬಿದ್ದಿದೆ. 2 ವರ್ಷ ಹಳೆಯ ಐಫೋನ್‌ 11 ಡೆಲಿವರಿ ಸಮಯ 3-4 ವಾರವಿದ್ದರೆ, ಇತ್ತೀಚಿಗೆ ಬಿಡುಗಡೆಗೊಂಡ ಐಫೋನ್‌ 13 ಡೆಲಿವರಿಗೆ 1 ತಿಂಗಳಿಗಿಂತ ಹೆಚ್ಚು ಸಮಯ ಬೇಕೆಂದು ಆ್ಯಪಲ್‌ ಸಂಸ್ಥೆ ತಿಳಿಸಿದೆ. ಸ್ಯಾಮಸಂಗ್‌ ಸಂಸ್ಥೆಗೂ ಇದೇ ಸಮಸ್ಯೆಯಿದ್ದು, ಆದಷ್ಟು ಬೇಗ ಸ್ಟಾಕ್‌ ಕಳಿಸಿ ಎಂದು ಸಂಸ್ಥೆಯ ಪ್ರಾದೇಶಿಕ ಕಚೇರಿಗಳು ಮುಖ್ಯ ಕಚೇರಿಗೆ ಮನವಿ(ಎಸ್‌ಒಎಸ್‌) ಕಳಿಸಿವೆ. ಇನ್ನು 7-10 ದಿನಗಳ ಕಾಲ ಡೆಲಿವರಿ ಸಮಸ್ಯೆಯಾಗಲಿದೆ ಎಂದು ಶಿಯೋಮಿ ತಿಳಿಸಿದೆ.

ಇದನ್ನೂ ಓದಿ:ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

ವಾರ್ಷಿಕ ವಹಿವಾಟಿನಲ್ಲಿ ದೀಪಾವಳಿ ಪಾಲು – ಶೇ. 30-35
ಬೇಡಿಕೆಗಿಂತ ಕಡಿಮೆಯಿರುವ ಸ್ಟಾಕ್‌ – ಶೇ. 15-30
ಐಫೋನ್‌ 11,13 ಡೆಲಿವರಿ ಸಮಯ – 3-4 ತಿಂಗಳು
ಕ್ಸಿಯೋಮಿ ಸಂಸ್ಥೆಯಲ್ಲಿ ಡೆಲಿವರಿ ಸಮಸ್ಯೆ – 7-10ದಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next