Advertisement

2ನೇ ಅಲೆ ವೇಳೆಯಲ್ಲಾದ ಪ್ರಮಾದ ಮತ್ತೆ ಬೇಡ

11:40 PM Jan 14, 2022 | Team Udayavani |

ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ವ್ಯಾಪಕಗೊಳ್ಳುತ್ತಿದ್ದು ಜನರನ್ನು ಮತ್ತೆ ಆತಂಕಕ್ಕೀಡುಮಾಡಿದೆ. ಕೊರೊನಾ ರೂಪಾಂತರಿ ವೈರಸ್‌ನ ಹರಡುವಿಕೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ದಿನಕ್ಕೊಂದು ಮಾರ್ಗಸೂಚಿ, ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ ಈಗಾಗಲೇ ವೈದ್ಯಕೀಯ ತಜ್ಞರು ಹೇಳಿರುವಂತೆಯೇ ಕೊರೊನಾ ವೈರಸ್‌ನ ರೂಪಾಂತರಿ ಒಮಿಕ್ರಾನ್‌ ಈ ಹಿಂದಿನ ರೂಪಾಂ ತರಿಯಾದ ಡೆಲ್ಟಾದಷ್ಟು ಅಪಾಯಕಾರಿಯಲ್ಲವಾದರೂ ಇದರ ಹರಡು ವಿಕೆ ಬಹಳಷ್ಟು ತೀವ್ರಗತಿಯಲ್ಲಿರುತ್ತದೆ ಎಂಬುದು ಕಳೆದೆರಡು ವಾರ ಗಳ ಅಂಕಿಅಂಶಗಳನ್ನು ಅವಲೋಕಿಸಿದಾಗ ಸಾಬೀತಾಗುತ್ತದೆ. ಈಗಾ ಗಲೇ ಚಾಲ್ತಿಯಲ್ಲಿರುವ ಕೊರೊನಾ ನಿರೋಧಕ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವುದು ಅತ್ಯಂತ ಸುರಕ್ಷಿತ ಕ್ರಮವಾಗಿದ್ದು ಒಂದು ವೇಳೆ ಲಸಿಕೆ ಪಡೆದುಕೊಂಡವರಿಗೂ ಸೋಂಕು ತಗಲಿದಲ್ಲಿ ಗಂಭೀರ ಪರಿ ಣಾಮವೇನೂ ಆಗದೆಂದು ಪ್ರತಿಪಾದಿಸುತ್ತ ಬರಲಾಗಿದೆ.

Advertisement

ಇವೆಲ್ಲದರ ನಡುವೆ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದೆಯಾದರೂ ಪ್ರಾಣ ಹಾನಿ, ಆಸ್ಪತ್ರೆಗೆ ದಾಖ ಲಾಗುತ್ತಿರುವವರ ಸಂಖ್ಯೆ ಕಡಿಮೆ ಇರುವುದು ಒಂದಿಷ್ಟು ನಿಟ್ಟುಸಿರು ಬಿಡುವ ವಿಚಾರ. ಇದರ ಹೊರತಾಗಿಯೂ ಕೇಂದ್ರ ಮತ್ತು ರಾಜ್ಯ ಸರಕಾರ ಸೋಂಕು ನಿಯಂತ್ರಣ ನೆಪದಲ್ಲಿ ಪದೇ ಪದೆ ನಿರ್ಬಂಧಗಳನ್ನು ಹೇರುವುದು, ಕೆಲವು ತಜ್ಞರು ಬೇಕಾಬಿಟ್ಟಿಯಾಗಿ ಸಲಹೆಗಳನ್ನು ನೀಡುತ್ತಿರುವುದು, ಕೊರೊನಾ ನಿರೋಧಕ ಲಸಿಕೆ ತಯಾರಿಕ ಕಂಪೆನಿಗಳು ತಮ್ಮ ಲಸಿಕೆಗಳು ಹೆಚ್ಚು ಸಕ್ಷಮ.. ಹೀಗೆ ತರಹೇವಾರಿ ಹೇಳಿಕೆ ನೀಡುವ ಮೂಲಕ ಜನರನ್ನು ಗೊಂದಲದ ಮಡುವಿನಲ್ಲಿ ಮುಳುಗಿಸುವ ಪ್ರಯತ್ನ ನಡೆಯುತ್ತಿವೆ. ಜನರ ಆರೋಗ್ಯದ ವಿಚಾರದಲ್ಲಿ ವೈದ್ಯಕೀಯ ರಂಗ ಕೂಡ ಒಂದಿಷ್ಟು ಸೂಕ್ಷ್ಮತೆಯಿಂದ ನಡೆದು ಕೊಳ್ಳಬೇಕಾದ ಅನಿವಾರ್ಯತೆ ಇದೆ. ವೈದ್ಯರು ಮತ್ತು ಆಸ್ಪತ್ರೆಗಳು ಕೊರೊನಾದ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಾಕ್ಷಣ ಆ ವ್ಯಕ್ತಿ ಯನ್ನು ಅನಗತ್ಯ ಪರೀಕ್ಷೆ, ಚಿಕಿತ್ಸೆ, ಔಷಧೋಪಚಾರ, ಆಸ್ಪತ್ರೆ ದಾಖಲೀ ಕರಣ ಮತ್ತಿತರ ಕ್ರಮಗಳನ್ನು ಅನುಸರಿಸುತ್ತಿರುವುದು ಸಹಜ ವಾಗಿಯೇ ಜನರು ಪರೀಕ್ಷೆಗಾಗಿ ಆಸ್ಪತ್ರೆ ಅಥವಾ ಪರೀಕ್ಷಾ ಕೇಂದ್ರಕ್ಕೆ ತೆರಳಲೂ ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸದ್ಯ ದೇಶಾದ್ಯಂತ ಚಳಿಗಾಲವಾದ್ದರಿಂದ ಶೀತ, ನೆಗಡಿ, ಕೆಮ್ಮು, ಜ್ವರ ಜನರನ್ನು ಕಾಡುವುದು ಸಾಮಾನ್ಯವಾಗಿದ್ದು ಇವೆಲ್ಲವುಗಳಿಗೂ ಮಿತಿಮೀರಿದ ಔಷಧೋಪಚಾರ ನಡೆಸುತ್ತಿರುವ ಬಗ್ಗೆೆ ಆರೋಪಗಳು ಕೇಳಿ ಬರಲಾರಂಭಿಸಿವೆ. ಈ ಬಗ್ಗೆ ಸುಮಾರು 35 ಮಂದಿ ವೈದ್ಯರ ಗುಂಪು ಕೇಂದ್ರ, ರಾಜ್ಯ ಸರಕಾರಗಳಿಗೆ ಬಹಿರಂಗ ಪತ್ರ ಬರೆದು ಇವೆಲ್ಲವುಗಳಿಗೆ ಕಡಿವಾಣ ಹಾಕಲು ಕಿವಿಮಾತು ಹೇಳಿದೆ.

ಕೊರೊನಾ ಸೋಂಕಿತರ ಪರೀಕ್ಷೆ, ಚಿಕಿತ್ಸೆ ಮತ್ತು ನೀಡುವ ಔಷಧಗಳ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಬೇಕು. ಸೋಂಕಿತರ ಮೇಲೆ ಪ್ರಯೋಗ ನಡೆಸುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ತಕ್ಕಬದ್ಧ ಮತ್ತು ಶಿಫಾರಸು ಮಾಡಲ್ಪಟ್ಟ ಔಷಧಗಳು, ಚಿಕಿತ್ಸೆಗಳು ಮತ್ತು ಪರೀಕ್ಷೆಗಳನ್ನು ಮಾತ್ರವೇ ನಡೆಸಲು ನಿರ್ದೇಶನ ನೀಡುವಂತೆಯೂ ಈ ವೈದ್ಯರು ಆಗ್ರಹಿಸಿದ್ದಾರೆ. ವೈದ್ಯರ ನೈಜ ಕಳಕಳಿಯನ್ನು ಅರ್ಥ ಮಾಡಿ ಕೊಂಡು ಜನತೆಯಲ್ಲಿನ ಗೊಂದಲ, ಅನುಮಾನಗಳನ್ನು ನಿವಾರಿಸ ಬೇಕು. ಆ ಮೂಲಕ ಜನರ ಆರೋಗ್ಯವನ್ನು ಕಾಪಾಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next