ಪುಣೆ: ಕೋವಿಡ್ ಸೋಂಕಿಗೆ ನಾಲ್ಕನೇ ಬಾರಿ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ಸೋಂಕು ವಿಭಾಗದ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾಜಿ ಮುಖ್ಯಸ್ಥ ಡಾ.ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.
ಕೊರೊನಾಕ್ಕೆ ಒಬ್ಬ ವ್ಯಕ್ತಿ ಮೂರು ಬಾರಿ ಲಸಿಕೆ ಪಡೆದುಕೊಂಡಿದ್ದಾನೆಂದರೆ, ಆತನ ಟಿ ಜೀವಕೋಶಗಳು (ರೋಗನಿರೋಧಕ ಶಕ್ತಿಯನ್ನುಂಟು ಮಾಡುವ ಬಿಳಿ ರಕ್ತಕಣಗಳು) ಮೂರು ಬಾರಿ ತರಬೇತಾಗಿವೆ ಎಂದರ್ಥ.
ಈಗಿನ ಪರಿಸ್ಥಿತಿಯಲ್ಲಿ ಅಂದರೆ ಕೊರೊನಾದ ಹೊಸಹೊಸ ತಳಿಗಳನ್ನು ಗಮನಿಸಿದರೆ 4ನೇ ಲಸಿಕೆ ಅಗತ್ಯವಿಲ್ಲ ಅನಿಸುತ್ತದೆ. ಯಾವುದೇ ಹೊಸ ತಳಿಗಳು ಬಂದರೂ ಮೂಲ ವೈರಸ್ ಬದಲಾಗಿಲ್ಲ. ಜೊತೆಗೆ ಪ್ರಸ್ತುತ ಇರುವ ಲಸಿಕೆಗಳ ನಡುವೆಯೇ ಹೊಸತಳಿಗಳು ಬರುತ್ತಲೇ ಇವೆ ಎಂದು ಅವರು ಹೇಳಿದ್ದಾರೆ.