ಸಿಡ್ನಿ: ವಿದೇಶ ಪ್ರವಾಸದ ವೇಳೆ ಅಭ್ಯಾಸ ಪಂದ್ಯಗಳ ಅಗತ್ಯ ಕಂಡುಬರದು ಎಂಬುದಾಗಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆ್ಯಂಡ್ರೂé ಮೆಕ್‌ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
4 ಪಂದ್ಯಗಳ “ಬೋರ್ಡರ್-ಗಾವಸ್ಕರ್ ಟ್ರೋಫಿ’ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯ ತಂಡ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಪ್ರವಾಸಿ ತಂಡಕ್ಕೆ ಯಾವುದೇ ಅಭ್ಯಾಸ ಪಂದ್ಯವನ್ನು ಆಯೋಜಿಸಿಲ್ಲ. ಬೇಗ ಆಗಮಿಸಿ ಅಭ್ಯಾಸ ಪಂದ್ಯ ಆಡುವುದಕ್ಕಿಂತ ಮಿಗಿಲಾಗಿ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ಹೋರಾಟಕ್ಕೆ ಅಣಿಯಾಗುವುದರಿಂದ ಹೆಚ್ಚು ಲಾಭವಿದೆ ಎಂಬುದು ಮೆಕ್‌ಡೊನಾಲ್ಡ್ ಅಭಿಪ್ರಾಯ.
ಈ ಬಾರಿಯ ಸರಣಿಗೆ ಒಂದು ವಾರ ಉಳಿದಿರುವಾಗ ಆಸ್ಟ್ರೇಲಿಯ ತಂಡ ಭಾರತಕ್ಕೆ ಆಗಮಿಸಲಿದೆ.
ಆಸ್ಟ್ರೇಲಿಯ ಕಳೆದ 19 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.