Advertisement

ಯಾವುದೇ ಮುಸ್ಲಿಂ ಪುರುಷ 3 ಮಹಿಳೆಯರನ್ನು ಮದುವೆಯಾಗಬಾರದು: ಅಸ್ಸಾಂ ಸಿಎಂ

04:57 PM Jun 02, 2022 | Team Udayavani |

ನವದೆಹಲಿ: ಯಾವುದೇ ಮುಸ್ಲಿಂ ಪುರುಷರು ಮೂವರ ಬದಲಿಗೆ ಒಬ್ಬ ಮಹಿಳೆಯೊಂದಿಗೆ ವಿವಾಹವಾಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ,  ಪತ್ನಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ಪ್ರತಿಪಾದಿಸುತ್ತಿರುವಾಗ, ಯಾವುದೇ ಮುಸ್ಲಿಂ ಪುರುಷ 3 ಮಹಿಳೆಯರನ್ನು ಮದುವೆಯಾಗಬಾರದು ಎಂದು ಅಸ್ಸಾಂ ಸರ್ಕಾರದ ನೀತಿ ಸ್ಪಷ್ಟವಾಗಿದೆ. ತಲಾಖ್ ನೀಡಬೇಡಿ, ಕಾನೂನುಬದ್ಧವಾಗಿ ವಿಚ್ಛೇದನ ನೀಡಿ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು. ಆಸ್ತಿಯಲ್ಲಿ 50% ಪಾಲನ್ನು ಹೆಂಡತಿಗೆ ನೀಡಿ. ಸರ್ಕಾರ ಮತ್ತು ಸಾಮಾನ್ಯ ಮುಸ್ಲಿಮರ ದೃಷ್ಟಿಕೋನಗಳು ಒಂದೇ ಆಗಿವೆ ಎಂದಿದ್ದಾರೆ.

“ಈಶಾನ್ಯ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯ” ಇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನ್ನಣೆ ನೀಡುತ್ತಾ, ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶಕ್ಕೆ ಪ್ರಧಾನಿಯವರ ಪ್ರಭಾವದಿಂದಾಗಿ ಪ್ರಗತಿಯಾಗಿದೆ , ವಿದ್ಯಾರ್ಥಿಗಳ ಮೇಲಿನ ಇಂತಹ ತಾರತಮ್ಯವು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next