Advertisement

ಮಹಿಳಾ ಸ್ಪರ್ಧಿಗಳೇ ಕಮ್ಮಿ

06:00 AM Oct 16, 2018 | |

ಭೋಪಾಲ್‌/ಹೈದರಾಬಾದ್‌/ಜೈಪುರ: ಮಧ್ಯ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಬಿರುಸಾಗಿದೆ. ಅದಕ್ಕೆ ಪೂರಕವಾಗಿ ಅ.16ರಂದು ಛತ್ತೀಸ್‌ಗಡ ಚುನಾವಣೆಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ. ಒಂದೇ ಹಂತದಲ್ಲಿ 230 ಕ್ಷೇತ್ರಗಳಿಗೆ ನ.28ರಂದು ಮತದಾನ ನಡೆಯಲಿದೆ. ಹೀಗಾಗಿ ಗುರುವಾರದಿಂದ ಪ್ರಚಾರವೂ ಬಿರುಸಾಗಲಿದೆ. ಕುತೂಹಲಕಾರಿ ಅಂಶವೆಂದರೆ ಮಹಿಳಾ ಮೀಸಲಿನ ಬಗ್ಗೆ ಪ್ರಖರವಾಗಿ ಮಾತನಾಡುವ ಎಲ್ಲಾ ರಾಜಕೀಯ ಪಕ್ಷಗಳು ಮಧ್ಯಪ್ರದೇಶದಲ್ಲಿ ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅನುವು ಮಾಡಿಕೊಟ್ಟಿಲ್ಲ. 2008ರಲ್ಲಿ ಸ್ಪರ್ಧಿಸಿದ ಒಟ್ಟು ಪುರುಷರ ಪೈಕಿ ಶೇ.6.9ರಷ್ಟು ಗೆದ್ದಿದ್ದರು. ಅದೇ ವರ್ಷ ಒಟ್ಟು ಮಹಿಳೆಯರ ಸಂಖ್ಯೆಯ ಶೇ.10.8ರಷ್ಟು ಮಂದಿ ಮಾತ್ರ ಗೆದ್ದಿದ್ದಾರೆ. 2013ರಲ್ಲಿ ಶೇ.8.3 ಪುರುಷರು, ಶೇ.15ರಷ್ಟು ಮಹಿಳೆಯರು ಸ್ಪರ್ಧಿಸಿದ್ದರು. 2013ರಲ್ಲಿ ಬಿಜೆಪಿ ಕೇವಲ 28 ಮಹಿಳೆಯರಿಗೆ, ಕಾಂಗ್ರೆಸ್‌ 23 ಮಂದಿಗೆ ಟಿಕೆಟ್‌ ನೀಡಿತ್ತು. ಹಾಲಿ ವಿಧಾನಸಭೆಯಲ್ಲಿ 33 ಮಂದಿ ಶಾಸಕಿಯರು ಇದ್ದಾರೆ. ಈ ಪೈಕಿ ಹೆಚ್ಚಿನವರು ರಾಜಕೀಯ ಹಿನ್ನೆಲೆ ಇರುವ ಕುಟುಂಬಕ್ಕೇ ಸೇರಿದವರು. ಒಟ್ಟಾರೆಯಾಗಿ ಚುನಾವಣಾ ವ್ಯವಸ್ಥೆಯೇ ಮಹಿಳಾ ಪರವಾಗಿರಬೇಕಾಗಿದೆ ಎಂದು ಪ್ರಮುಖ ಮಹಿಳಾ ನಾಯಕಿಯರು ಅಭಿಪ್ರಾಯ ಪಟ್ಟಿದ್ದಾರೆ. ಶೇ.33ರಷ್ಟು ಮೀಸಲು ವ್ಯವಸ್ಥೆ ಜಾರಿಯಾದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅನುಕೂಲವಾದೀತು ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

Advertisement

ಜ್ಯೋತಿಷಿಗಳಿಗೆ ಡಿಮಾಂಡ್‌: ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ರಾಜಕೀಯ ನಾಯಕರು ಪ್ರಸಿದ್ಧ ಜ್ಯೋತಿಷಿಗಳ ಬಳಿಗೆ ಎಡತಾಕುತ್ತಿದ್ದಾರೆ. ದುಷ್ಟ ಶಕ್ತಿಗಳು ನಾಶವಾಗಿ ಚುನಾವಣೆಯಲ್ಲಿ ನನಗೇ ಜಯವಾಗಲಿ ಎಂಬ ಆಶೀರ್ವಾದವನ್ನೂ ಪಡೆಯುತ್ತಿದ್ದಾರೆ. ಉಜ್ಜೆ„ನಿ, ದಾಟಿಯಾ ಮತ್ತು ಒಂಕಾರೇಶ್ವರಗಳಲ್ಲಿನ ಪ್ರಮುಖ ಹಾಗೂ ಪ್ರಸಿದ್ಧ ಜ್ಯೋತಿಷಿಗಳು ಈಗ ಫ‌ುಲ್‌ ಬ್ಯುಸಿಯಾಗಿದ್ದಾರೆ. ಉಜ್ಜೆ„ನಿಯ ಜ್ಯೋತಿಷಿ ಪಂಡಿತ್‌ ಆನಂದ ಶಂಕರ್‌ ವ್ಯಾಸ್‌ 12 ಮಂದಿ ರಾಜಕೀಯ ನಾಯಕರಿಗೆ ಆಶೀರ್ವಾದ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. 

20ಕ್ಕೆ ತೆಲಂಗಾಣಕ್ಕೆ ಭೇಟಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅ.20ಕ್ಕೆ ತೆಲಂಗಾಣಕ್ಕೆ ಚುನಾವಣಾ ಪ್ರಚಾರಕ್ಕಾಗಿ  ತೆರಳಲಿದ್ದಾರೆ. 

ಆಯ್ಕೆಗೆ ಸಮಾಲೋಚನೆ: ರಾಜಸ್ಥಾನದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅ.20-23ರ ವರೆಗೆ ಎರಡನೇ ಹಂತದ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ರಮ ನಡೆಯಲಿದೆ. ಭಾನುವಾರ 31 ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಮುಖ್ಯಮಂತ್ರಿ ವಸುಂಧರಾ ರಾಜೇ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. 

ಮತ್ತೆ ಸೂಟ್‌ಬೂಟ್‌ ಪ್ರಯೋಗ
“ಸೂಟ್‌ ಬೂಟ್‌ ಕಿ ಸರ್ಕಾರ್‌’ ಹೇಳಿಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ಪುನರುಚ್ಚರಿಸಿದ್ದಾರೆ. ಮಧ್ಯಪ್ರದೇಶದ ಡಾಟಿಯಾದಲ್ಲಿ ಮಾತನಾಡಿದ ಅವರು “ನೀವು ಸೂಟ್‌ ಬೂಟ್‌ ಹಾಕದೇ ಇದ್ದರೆ ಪ್ರಧಾನಿಗಳ ಹೃದಯದಲ್ಲಿ ಸ್ಥಾನವೇ ಇಲ್ಲ ಮತ್ತು ನೀವು ಅವರ ಭಾಯ್‌ (ಸಹೋದರ) ಆಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ದಲಿತರು, ಮಹಿಳೆಯರು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತರು, ಬಡವರ ಮೇಲೆ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೌನವಾಗಿದ್ದರು. ಪ್ರಧಾನಿ ಮೋದಿ ಉದ್ಯಮಿ ಅನಿಲ್‌ ಅಂಬಾನಿ 45 ಸಾವಿರ ಕೋಟಿ ರೂ. ಮೌಲ್ಯದ ರಫೇಲ್‌ ಕೊಡಿಸುವ ವಾಗ್ಧಾನ ಮಾಡಿದ್ದರು ಎಂದು ರಾಹುಲ್‌ ದೂರಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next