Advertisement

Congress ಪಕ್ಷವನ್ನು ಮುಸ್ಲಿಮರು ಬಲವಾಗಿ ಬೆಂಬಲಿಸುತ್ತಾರೆ: ಸಿದ್ದರಾಮಯ್ಯ

06:38 PM Apr 21, 2023 | Team Udayavani |

ಬೆಂಗಳೂರು : ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯು ಪರಿಣಾಮ ಬೀರುವುದಿಲ್ಲ, ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಬೆಂಬಲಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ

Advertisement

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಚುನಾವಣೆಗಳು ಮುಖ್ಯವಾಗಿ ಸ್ಥಳೀಯ ಸಮಸ್ಯೆಗಳ ಮೇಲೆ ನಡೆಯುತ್ತವೆ. ದಕ್ಷಿಣ ರಾಜ್ಯದಲ್ಲಿ ಗೆಲುವು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಮೆಟ್ಟಿಲಾಗಲಿದೆ ಎಂದರು.

ಇದು ತನ್ನ ಕೊನೆಯ ಚುನಾವಣ ಯುದ್ಧವಾಗಿದೆ ಎಂದು ಪುನರುಚ್ಚರಿಸಿದ ವಿರೋಧ ಪಕ್ಷದ ನಾಯಕ, 90 ಪ್ರತಿಶತದಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಆಡಳಿತಾರೂಢ ಬಿಜೆಪಿ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next