ರಾಮದುರ್ಗ: ರಾಜ್ಯ ಬಿಜೆಪಿ ಸರಕಾರ ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸ್, ಏನಾ ದರೂ ವಿಷಯವನ್ನಿಟ್ಟುಕೊಂಡು ಟೀಕಿ ಸುವ ಮೂಲಕ ಸರಕಾರ ಕೈಗೊಂಡ ಅಭಿವೃದ್ಧಿಯನ್ನು ಮರೆಮಾಚಲು ಮುಂದಾಗುತ್ತಿದೆ. ಇದಕ್ಕೆ ನಾವು ಸೊಪ್ಪು ಹಾಕುವ ಮಾತೇ ಇಲ್ಲ. ರಾಜ್ಯದ ಅಭಿವೃದ್ಧಿಯೊಂದೇ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ತಾಲೂಕಿನ ವಿವಿಧ ಇಲಾಖೆಗಳ 671.28 ಕೋಟಿ ರೂ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವೇಕ ಹೆಸರಿನಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಿ ಮಕ್ಕಳಿಗೆ ಸುಸಜ್ಜಿತ ಕೊಠಡಿ ಗಳೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಕಾರ್ಯಕ್ಕೆ ಮುಂದಾದರೆ ಇದರಲ್ಲಿಯೂ ತಪ್ಪು ಹುಡುಕುವ ಕೆಲಸವನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ. ಇವರು ಏನೇ ಮಾಡಿದರೂ ನಾವು ಮಾಡುವ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದರು.
ಸಾಮಾಜಿಕ ನ್ಯಾಯದ ಹೆಸರಲ್ಲಿ ಹಲವು ಸರಕಾರಗಳು ಬಂದು ಹೋದವೇ ಹೊರತು ಯಾರಿಂದಲೂ ಸಾಮಾಜಿಕ ನ್ಯಾಯ ಒದಗಿಸಲಾಗದೆ ಭಾಷಣಕ್ಕಷ್ಟೇ ಸೀಮಿತವಾದವು. ಆದರೆ ಬಿಜೆಪಿ ಸರಕಾರ ಬಂದ ಮೇಲೆ ಸರ್ವರಿಗೂ ಶಿಕ್ಷಣ, ಉದ್ಯೋಗ ನೀಡುವ ಕೆಲಸ ವನ್ನು ಮಾಡಿ ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಮಾಡಿದೆ ಎಂದರು.