Advertisement

ಎಷ್ಟೇ ಪ್ರಭಾವಿಯಾದರೂ ಪಕ್ಷಕ್ಕೆ ಮುಜುಗರ ತಂದರೆ ಕ್ರಮ: ಸತೀಶ್ ಜಾರಕಿಹೊಳಿ

05:12 PM Aug 06, 2022 | Team Udayavani |

ಬೆಳಗಾವಿ: ‘ಕಾಂಗ್ರೆಸ್‌ನಲ್ಲಿ ಎಷ್ಟೇ ಪ್ರಭಾವಿ ನಾಯಕರಿದ್ದರೂ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೈಕಮಾಂಡ್ ಸಂದೇಶ ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ಪಾದಯಾತ್ರೆ ನಡೆದಿದೆ. ಆಗಸ್ಟ್ 9 ರಂದು ನಗರದ ಕಾಂಗ್ರೆಸ್‌ ಭವನದಲ್ಲಿ ಸಮಾರೋಪ ಸಮಾವೇಶ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಬೆಳಗಾವಿ ಮಹಾನಗರಪಾಲಿಕೆ ಮಹಾಪೌರ ಚುನಾವಣೆ ಕುರಿತು ಪ್ರಸ್ತಾಪಿಸಿದ ಅವರು, ವಿಧಾನ ಸಭೆ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್‌ ನಿಂದ ಬಿಜೆಪಿ ಶಾಸಕರಿಗೆ ಗೌನ್ ಉಡುಗೊರೆ ನೀಡಲಾಗುವುದು ಎಂದರು.

ಮೇಕೆದಾಟು ಯೋಜನೆ ಈಗಾಗಲೇ ಅರ್ಧದಷ್ಟು ಮುಗಿದಿದೆ. ಸರ್ಕಾರ ವಿಳಂಬ ನೀತಿ ಸರಿಯಲ್ಲ, ಅನಿರ್ವಾಯತೆ ಎದುರಾದರೆ ರಾಜ್ಯದ ಜನತೆಗಾಗಿ ಮತ್ತೆ ಪಾದಯಾತ್ರೆ ಮಾಡಿ ಸರ್ಕಾರ ಗಮನ ಸೆಳೆಯಲಾಗುವುದು. ನವೆಂಬರ್‌ ನಲ್ಲಿ ಮತ್ತೆ ಪಾದಯಾತ್ರೆ ಮಾಡುವ ಸಾಧ್ಯತೆ ಇದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದೆವೆ ಅದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಪಕ್ಷದ ನಾಯಕನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ, ಅದರಲ್ಲಿ ಏನೂ ಮುಚ್ಚು ಮರೆ ಇಲ್ಲ. ಆದರೆ ಮಾಧ್ಯಮಗಳಲ್ಲಿ ಬೇರೆ ರೀತಿ ವೈರಲ್‌ ಆಗಿದೆ ಎಂದು ಪ್ರತಿಕ್ರಿಯಿಸಿದರು.

Advertisement

ಹೈಕಮಾಂಡ್ ನಾಯಕರ ಜತೆ ಮುಂದಿನ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಪ್ರಭಾವಿ ಹಾಗೂ ಜನಪರ ನಾಯಕರೂ ಹೌದು, ಹೀಗಾಗಿ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ, ಇದರಲ್ಲಿ ಶೇ 90 ರಷ್ಟು ಸಿದ್ದರಾಮಯ್ಯನವರ ಅಭಿಮಾನಿಗಳು ಭಾಗಿಯಾಗಿದ್ದರು ಎಂದರು‌.

ಯಮಕನಮರಡಿ ಕ್ಷೇತ್ರದಲ್ಲಿ ಸಚಿವ ಉಮೇಶ ಕತ್ತಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಅವರಿಗೆ ಬಿಜೆಪಿ ಉಸ್ತುವಾರಿ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿಧಾನ ಸಭಾ ಚುನಾವಣೆ ಇನ್ನೂ 7-8 ತಿಂಗಳು ಬಾಕಿ ಇದೆ. ಯಮಕನಮರಡಿ ಕ್ಷೇತ್ರದ ಮೇಲೆ ಬಿಜೆಪಿ ಹದ್ದಿನ ಕಣ್ಣಿದೆ. ಫೈಟ್ ಮಾಡಲಿ ನಾವು ಸಜ್ಜಾಗಿದ್ದೆವೆ ಎಂದು ತಿರುಗೇಟು ನೀಡಿದರು.

ಫಿರೋಜ್ ಸೇಠ್ ನಡುವಿನ ವೈಮನಸ್ಸಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅಸಮಾಧಾನ ಸರ್ವೇ ಸಾಮಾನ್ಯ ಚುನಾವಣೆ ಬರಲಿ, ಇವಾಗ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಬೆಲೆ ಏರಿಕೆ ಬಗ್ಗೆ ಬಿಜೆಪಿಗರು ಮಾತು ಕೇಳುತ್ತಿಲ್ಲ. ಚಿರತೆ ಮಾತನ್ನಾದರೂ ಕೇಳುತ್ತಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next