Advertisement
ಆಟೋ ಚಾಲಕರಾಗಿದ್ದ ವಿಲಿಯಂ ಲೋಬೋ ಅವರಿಗೆ ನಿರೀಕ್ಷಿತ ಆದಾಯ ಬಾರದಿದ್ದಾಗ ಸಾಲ ಪಡೆದು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸಿದರು. ಈಗ ಇವರಲ್ಲಿ 22 ಎಚ್‌ಎಫ್ತ ಳಿಯ ದನಗಳಿದ್ದು, ದಿನವೊಂದಕ್ಕೆ 7 ರಿಂದ 300 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ.
ಹೈನುಗಾರಿಕೆಗಾಗಿ ಇವರು ತಮ್ಮ ಮೂರು ಎಕರೆ ಜಮೀನಿನಲ್ಲಿ ‘ಸಿಒ3’ ಹಾಗೂ ‘ಸಂಪೂರ್ಣ’ ತಳಿಯ ಹಸಿರು ಮೇವು ಬೆಳೆಸಿದ್ದು, ಇದನ್ನು ಕಟಾವು ಮಾಡಿ ಬಳಿಕ ಯಂತ್ರದಲ್ಲಿ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ದನಗಳಿಗೆ ನೀಡುತ್ತಿದ್ದಾರೆ. ಇದರೊಂದಿಗೆ ಪೌಷ್ಟಿಕ ಆಹಾರವನ್ನೂ ಕೊಡುತ್ತಾರೆ. ಒಮ್ಮೆ ಕಟಾವು ಮಾಡಿದ ಮೇವು 60- 70 ದಿನಗಳಲ್ಲಿ ಮತ್ತೆ ಕಟಾವಿಗೆ ಬರುತ್ತಿದ್ದು, ಇದರಿಂದ ಇವರಿಗೆ ಹಸಿರು ಮೇವಿನ ಕೊರತೆಯಾಗುವುದೇ ಇಲ್ಲ.
Related Articles
Advertisement
ಹಟ್ಟಿ ಮತ್ತು ಸುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ದಿನಕ್ಕೆ ನಾಲ್ಕು ಬಾರಿ ದನಗಳನ್ನು ಹಾಗೂ ಹಟ್ಟಿಯನ್ನು ತೊಳೆಯುತ್ತಿದ್ದು,ಹಟ್ಟಿಯಲ್ಲಿ ಸಗಣಿ ಬಿದ್ದ ಕೂಡಲೇ ಅದನ್ನು ಅಲ್ಲಿಂದ ತೆಗೆಯಲಾಗುತ್ತದೆ. ಸಗಣಿಯನ್ನು ದೊಡ್ಡ ಹೊಂಡದಲ್ಲಿ ಶೇಖರಿಸಿ ಕೃಷಿಗೆ, ಗೋಬರ್ ಗ್ಯಾಸ್‌ಗೆ ಬಳಕೆ ಮಾಡಿ, ಉಳಿದಿದ್ದನ್ನು ಮಾರಾಟ ಮಾಡುತ್ತಾರೆ. ಇನ್ನು ಹಟ್ಟಿ ತೊಳೆದ ನೀರು, ದನದ ಮೂತ್ರ ಸಹಿತ ಕೊಟ್ಟಿಗೆಯ ಎಲ್ಲ ತ್ಯಾಜ್ಯ ಒಂದೇ ಕಡೆ ಸಂಗ್ರಹಿಸಿ ಸಗಣಿ ಸ್ಲರಿ ತಯಾರಿಸಿ, ಕೃಷಿ, ಮೇವಿನ ಹುಲ್ಲಿಗೆ ಸಿಂಪಡಿಸುತ್ತಾರೆ. ಹೆಂಚಿನ ಮತ್ತು ಸಿಮೆಂಟ್ ಶೀಟ್‌ನ ಹಟ್ಟಿಗಳನ್ನು ನಿರ್ಮಿಸಿದ್ದಾರೆ. ಬೇಸಗೆಯಲ್ಲಿ ಸಿಮೆಂಟ್ ಶೀಟ್‌ನ ಹಟ್ಟಿಯಲ್ಲಿ ತಂಪು ವಾತಾವರಣ ಕಲ್ಪಿಸಲು ಅದರ ಮೇಲೆ ಸ್ಪಿಂಕ್ಲರ್ ಅಳವಡಿಸಿ, ನಿರಂತರ ನೀರು ಹಾಯಿಸಲಾಗುತ್ತದೆ. ಇನ್ನೊಂದೆಡೆ ಹಟ್ಟಿಯಲ್ಲಿ ಸಾಕಷ್ಟು ಫ್ಯಾನ್‌ಗಳು ದಿನದ 24 ಗಂಟೆಯೂ ತಿರುಗುತ್ತಿರುತ್ತದೆ. ಸಿಮೆಂಟ್ ಶೀಟಿನ ಮೇಲೆ ಹಾಯಿ ಸುವ ನೀರು ಕೂಡ ಹಟ್ಟಿಯ ಒಳಗಡೆ ಇಳಿದು ಸಗಣಿ ಸ್ಲರಿಯ ಗುಂಡಿಗೆ ಸೇರು ತ್ತದೆ. ವಿಲಿಯಂ ಅವರ ಕುಟುಂಬಕ್ಕೆ 1,800 ಅಡಿಕೆ ಗಿಡ, ರಬ್ಬರ್ ಗಿಡಗಳಿದ್ದರೂ, ಇವರು ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವುದು ಹೈನುಗಾರಿಕೆಗೆ.
ಎಲ್ಲವೂ ಯಾಂತ್ರೀಕೃತಹಾಲು ಕರೆಯಲು, ಹುಲ್ಲು ತುಂಡರಿಸಲು ಸಹಿತ ಹೆಚ್ಚಿನ ಕೆಲಸಗಳಿಗೆ ಇಲ್ಲಿ ಯಾಂತ್ರೀಕೃತ ಸೌಲಭ್ಯಗಳನ್ನು ಅಳವಡಿಸಲಾಗಿದೆ. ದನ, ಹಟ್ಟಿಗಳನ್ನು ಇಲ್ಲಿ ಯಂತ್ರದ ಮೂಲಕ ಅಧಿಕ ಒತ್ತಡದಿಂದ ನೀರನ್ನು ಹಾಯಿಸುವ ಮೂಲಕ ತೊಳೆಯಲಾಗುತ್ತದೆ. ದನಗಳ ಆರೋಗ್ಯದ ದೃಷ್ಟಿಯಿಂದ ಮಾನವ ಕೈಗಳು ದನಗಳನ್ನು ಹೆಚ್ಚು ಸ್ಪರ್ಶಿಸದಂತೆ ನೋಡಿಕೊಳ್ಳಲಾಗುತ್ತದೆ. ಎಂ.ಎಸ್. ಭಟ್, ಉಪ್ಪಿನಂಗಡಿ