ಬೆಂಗಳೂರು: ರಾಜ್ಯಾದ್ಯಂತ ಕೋವಿಡ್ 19 ಸೋಂಕಿನ ಹಾವಳಿ ಮಿತಿ ಮೀರುತ್ತಿದೆ.
ಇಂದು ಒಂದೇ ದಿನ ರಾಜ್ಯದಲ್ಲಿ 1694 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಈ ಹಿನ್ನಲೆಯಲ್ಲಿ ಕೋವಿಡ್ 19 ಸೋಂಕಿನ ಸರಪಣಿ ಮುರಿಯುವ ಉದ್ದೇಶದಿಂದ ರಾಜ್ಯ ಸರಕಾರ ಪ್ರತೀ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಪರಿಸ್ಥಿತಿಯನ್ನು ಘೋಷಿಸಿದ್ದು ಈ ಮಾರ್ಗಸೂಚಿ ಜುಲೈ 5ರಿಂದಲೇ ಜಾರಿಗೊಳ್ಳಲಿದೆ.
ಈ ಸಂದರ್ಭದಲ್ಲಿ ಆ ದಿನ ರಾಜ್ಯಾದ್ಯಂತ ಎಲ್ಲಾ ಚಟುವಟಿಕೆಗಳು ಒಂದು ದಿನದ ಮಟ್ಟಿಗೆ ಬಹುತೇಕ ಸ್ತಬ್ಧಗೊಳ್ಳಲಿದೆ.
ಈ ಹಿನ್ನಲೆಯಲ್ಲಿ ಈಗಾಗಲೇ ಪುನರ್ ಸಂಚಾರ ಆರಂಭಿಸಿರುವ ಕೆ.ಎಸ್.ಆರ್.ಟಿ.ಸಿ. ಬಸ್ಸು ಸೇವೆಗಳೂ ಸಹ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ ಎಂದು ಸಂಸ್ಥೆಯ ಉನ್ನತ ಮೂಲಗಳಿ ಮಾಹಿತಿ ನೀಡಿವೆ.
ಶನಿವಾರದವರೆಗೆ ಹಾಗೂ ಸೋಮವಾರ ಬೆಳಗ್ಗಿನಿಂದ ರಾಜ್ಯಾದ್ಯಂತ ನಿಗದಿತ ಮಾರ್ಗಗಳಲ್ಲಿ ಇದೀಗ ಓಡುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಯಥಾಪ್ರಕಾರ ಸಂಚಾರವನ್ನು ನಡೆಸಲಿವೆ.
ಹಾಗಾಗಿ ಭಾನುವಾರದಂದು ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಈಗಲೇ ಬದಲಿಸಿಕೊಳ್ಳುವುದು ಉತ್ತಮ.