Advertisement

ಚಾರ್ಲ್ಸ್ ಪಟ್ಟಾಭಿಷೇಕದಲ್ಲಿ ಕೊಹಿನೂರ್‌ ವಜ್ರ ಇಲ್ಲ!

10:25 PM May 05, 2023 | Team Udayavani |

ಲಂಡನ್‌: ಬ್ರಿಟನ್‌ ರಾಜನಾಗಿ ಮೂರನೇ ಚಾರ್ಲ್ಸ್‌ ಶನಿವಾರ ಪಟ್ಟಾಭಿಷಿಕ್ತರಾಗಲು ಸಿದ್ಧ ವಾಗಿದ್ದಾರೆ. ಇದರ ನಡು ವೆಯೇ, ರಾಜಮನೆತನದ ಹೊನ್ನ ಕಳಸದಂತಿ­ರುವ ರಾಣಿಯ ಕಿರೀಟದಲ್ಲಿ ಕೊಹಿ­ನೂರ್‌ ವಜ್ರವಿರುವುದಿಲ್ಲ ಎನ್ನುವ ವಿಚಾರ ತಿಳಿದು­ಬಂದಿದೆ. ಅಂದರೆ, ಸಿಂಹಾಸನಾ­ರೂಢರಾಗಲಿರುವ ಚಾರ್ಲ್ಸ್‌ ಪತ್ನಿ ಕ್ಯಾಮಿಲಾ, ಕೊಹಿನೂರ್‌ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂದು ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಸ್ಪಷ್ಟಪಡಿಸಿದೆ. “ಕೊಹಿನೂರ್‌ ದಿ ಹಿಸ್ಟರಿ ಆಫ್ ವರ್ಲ್ಡ್ ಮೋಸ್ಟ್‌ ಫೇಮಸ್‌ ಡೈಮಂಡ್‌’ ಪುಸ್ತಕದ ಸಹಬರಹಗಾರ್ತಿ ಅನಿತಾ ಆನಂದ್‌ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ಕೊಹಿನೂರ್‌ ವಜ್ರದ ಇತಿಹಾಸವು ಬ್ರಿಟಿಷ್‌ ವಸಾ­ಹತು ಶಾಹಿ ಚರಿತ್ರೆಯನ್ನು ನೆನಪಿಸುತ್ತದೆ. ಈ ಹಿನ್ನೆಲೆ ಯಲ್ಲಿ ಕೊಹಿನೂರ್‌ ಅನುಪಸ್ಥಿತಿ ಘೋಷಿಸಿರ­ಬಹುದು’ ಎಂದಿ ದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next