Advertisement

ನಾಡ ಧ್ವಜಕ್ಕೆ ಅಪಮಾನ ಇಲ್ಲ; ಸಚಿವ ಈಶ್ವರಪ್ಪ ಸ್ಪಷ್ಟನೆ

08:25 AM Nov 02, 2019 | Team Udayavani |

ಶಿವಮೊಗ್ಗ: ಕನ್ನಡ ಧ್ವಜದ ಬಗ್ಗೆ ಗೌರವ ಇದ್ದೆ ಇದೆ. ಮೊದಲಿನಿಂದಲೂ ರಾಷ್ಟ್ರಧ್ವಜ ಹಾರಿಸಬೇಕು ಎಂಬ ನಿಯಮದಂತೆ ಈ ಬಾರಿಯೂ ಧ್ವಜವನ್ನು ಹಾರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಹೋರಾಟ ಆರಂಭವಾದಾಗಿನಿಂದಲೂ, ಕನ್ನಡ ರಾಜ್ಯೋತ್ಸವದಂದು ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗುತ್ತಿದೆ. ಈ ಬಗ್ಗೆ ಗೊಂದಲ ಆರಂಭವಾಗಿದೆ ಎಂದು ನಾನು ಒಪ್ಪಲ್ಲ ಎಂದು ಅವರು ಕನ್ನಡ ರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸುವುದರ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ನಾಡಧ್ವಜಕ್ಕೆ ಅಪಮಾನ ಮಾಡಬೇಕೆಂದೇನೂ ಇಲ್ಲ.ಕನ್ನಡದ ಬಗ್ಗೆ ಕನ್ನಡ ಧ್ವಜದ ಬಗ್ಗೆ ಗೌರವ ಇದ್ದೆ ಇದೆ.

ಯಾರೋ ಒಬ್ಬೊಬ್ಬರು ಧ್ವಜ ಹಾರಿಸಿದಾಕ್ಷಣ ಕರ್ನಾಟಕವನ್ನು ಒಡೆಯುತ್ತಿದ್ದಾರೆ ಎಂದಲ್ಲ,ನಾವು ರಾಜ್ಯವನ್ನು ಒಡೆಯಲು ಬಿಡುವುದಿಲ್ಲ.ಕೆಲವರು ರಾಜ್ಯ ಒಡೆಯಬೇಕೆಂಬ ಅಪೇಕ್ಷೆ ಹೊಂದಿದ್ದಾರೆ.ಆದರೆ, ನಾವು ಕರ್ನಾಟಕವನ್ನು ಎರಡು ಭಾಗವಾಗಲು ಬಿಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next