Advertisement

ಪಟ್ಟದಕಲ್ಲನಲ್ಲಿ ಇಲ್ಲ ಮೂಲಸೌಕರ್ಯ

08:39 AM Jul 29, 2019 | Suhan S |

ಬಾದಾಮಿ: ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐತಿಹಾಸಿಕ ತಾಣ ಪಟ್ಟದಕಲ್ಲಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲ.

Advertisement

ಪಟ್ಟದಕಲ್ಲ ವಿಶಾಲ ಪ್ರದೇಶ ಹೊಂದಿದ್ದು, ಗೇಟ್ ಒಳಗಡೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿದೆ. ಶೌಚಾಲಯ ಕೊರತೆ: ವಿಶಾಲವಾದ ಪ್ರದೇಶದಲ್ಲಿ ಪ್ರತಿನಿತ್ಯ ನೂರಾರು ಸ್ಥಳೀಯ ಮತ್ತು ದೇಶ-ವಿದೇಶಗಳಿಂದ ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಾರೆ. ಅವರಿಗೆ ಶೌಚಾಲಯದ ಕೊರತೆಯಿದೆ.

ಕುಡಿಯುವ ನೀರಿನ ಕೊರತೆ: ಪ್ರತಿ ದಿನ ದೇಶ ವಿದೇಶ ಮತ್ತು ಸ್ಥಳೀಯ ಪ್ರವಾಸಿಗರು ಬರುತ್ತಾರೆ. ಅವರಿಗೆ ಸರಿಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಪ್ರವಾಸಿಗರು ಪ್ರಾಚ್ಯವಸ್ತು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತೆ ಕೊರತೆ: ಒಳಗಡೆ ಸ್ವಚ್ಛತೆ ಇಲ್ಲದಾಗಿದೆ. ಗಲೀಜು ನೀರು ಅನುಪಯುಕ್ತ ವಸ್ತುಗಳು ಬಿದ್ದಿವೆ. ಇವುಗಳ ಸ್ವಚ್ಛತೆ ಇಲ್ಲದಾಗಿದೆ.

ನಾಮಫಲಕ ಇಲ್ಲ: ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲನ ಪ್ರವೇಶದಲ್ಲಿ ಪ್ರವಾಸಿತಾಣ ಇರುವ ನಾಮಫಲಕ ಇಲ್ಲ. ದೇಶ ವಿದೇಶಗಳಿಂದ ಪ್ರವಾಸಿಗರು ಬರುವುದರಿಂದ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ನಾಮಫಲಕ ಅವಶ್ಯಕತೆ ಇದೆ.

Advertisement

ದುಬಾರಿ ಪ್ರವೇಶ ದರಕ್ಕೆ ಪ್ರವಾಸಿಗರ ಆಕ್ಷೇಪ: ಐತಿಹಾಸಿಕ ಪಟ್ಟದಕಲ್ಲು ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ದುಬಾರಿ ಪ್ರವೇಶ ದರ ಬಿಸಿ ತಟ್ಟಿದೆ.

ಭಾರತೀಯರಿಗೆ 40 ರೂ., ಹಾಗೂ ವಿದೇಶಿ ಪ್ರವಾಸಿಗರಿಗೆ 600 ರೂ., ಪ್ರವೇಶ ದರ ನಿಗದಿಗೊಳಿಸಿದ್ದು, ಪ್ರವೇಶ ದರ ದುಬಾರಿಯಾಗಿದ್ದಕ್ಕೆ ಪ್ರವೇಶದ್ವಾರದ ಬಳಿ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು 35 ರೂಪಾಯಿ ಪ್ರವೇಶ ದರ ಹಾಗೂ ಎಸಿ ದರ ರೂ. 5 ಸೇರಿ ಒಟ್ಟು 40 ರೂಪಾಯಿ ಭಾರತೀಯ ಪ್ರವಾಸಿಗರಿಗೆ ಪಡೆಯುತ್ತಿದ್ದಾರೆ.

ಪಟ್ಟದಕಲ್ಲು ದೇಗುಲ, ಸ್ಮಾರಕ ವೀಕ್ಷಿಸುವ ಪ್ರವಾಸಿಗರಿಗೆ ಯಾವುದೇ ಸೂಕ್ತ ಮೂಲಸೌಕರ್ಯ ಇಲ್ಲ. ಶೌಚಾಲಯ ನಿರ್ವಹಣೆಯೂ ಸೂಕ್ತವಿಲ್ಲ. ಸೌಕರ್ಯ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

 

•ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next