Advertisement

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ

07:12 PM Apr 18, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ನಡುವೆಯೇ ಸಾಮಾನ್ಯ ರೋಗಿಗಳು ಸಹ ಚಿಕಿತ್ಸೆಗಾಗಿ ಪರದಾಡುವಂತೆ ಆಗಿದೆ. ಮಹಿಳೆಯೊಬ್ಬರು ಐಸಿಯು ಬೆಡ್ ಸಿಗದ ಕಾರಣ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೋದಲ್ಲಿ ಐದಾರು ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿದ ಮನಕಲುವ ಘಟನೆ ರವಿವಾರ ನಡೆದಿದೆ.

Advertisement

ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆಯೊಬ್ಬರು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕುಟುಂಬದವರು ಕರೆದುಕೊಂಡು ಹೋಗಿದ್ದರು. ಆಗ ಐಸಿಯು ಬೆಡ್ ಖಾಲಿ ಇಲ್ಲ ಎಂದು ಹೇಳಿ ಆಸ್ಪತ್ರೆಯವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದರು.

ನಂತರ ಐಸಿಯು ಬೆಡ್‌ಗಾಗಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೋದಲ್ಲಿ ವಾತ್ಸಲ್ಯ, ಚಿರಾಯು,
ಧನ್ವಂತರಿ, ಕ್ರಿಸ್ಟಲ್, ಇಎಸ್‌ಐ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಎಲ್ಲೂ ಬೆಡ್ ಸಿಗದ ಕಾರಣ ಜಿಮ್ಸ್ ಆಸ್ಪತ್ರೆಗೆ ಆಟೋದಲ್ಲೇ ಆಕ್ಸಿಜನ್ ಸಿಲಿಂಡರ್ ಸಮೇತ ಕುಟುಂಬದವರು ಕರೆದುಕೊಂಡು ಬಂದಿದ್ದರು. ಆದರೆ, ಇಲ್ಲೂ ಬೆಡ್‌ಗಳು ಖಾಲಿ ಎನ್ನುವ ಕಾರಣಕ್ಕೆ ಮೂರು ಗಂಟೆಗಳ ಕಾಲ ಆಸ್ಪತ್ರೆಯ ಮುಂದೆಯೇ ಆಟೋದಲ್ಲಿ ರೋಗಿ ಪರದಾಡುವಂತೆ ಆಗಿತ್ತು.

ಇದನ್ನೂ ಓದಿ :ಹವಾಮಾನ ವೈಪರೀತ್ಯ ಕಡಿವಾಣಕ್ಕೆ ಅಮೆರಿಕ- ಚೀನಾ ಜಂಟಿ ಹೆಜ್ಜೆ

ಆಟೋದಲ್ಲಿ ಆಕ್ಸಿಜನ್ ಸಿಲಿಂಡರ್ ಮೇಲೆ ಉಸಿರಾಡುತ್ತಿರುವ ರೋಗಿಯ ಸ್ಥಿತಿ ಕರುಣಾಜನಕವಾಗಿತ್ತು. ಮಹಿಳೆ ಕಷ್ಟ ಅನುಭವಿಸುತ್ತಿರುವ ದೃಶ್ಯ ಮನಕಲುಕುವಂತೆ ಇತ್ತು. ಕೊನೆಗೆ ಮಧ್ಯಾಹ್ನ ವೇಳೆಗೆ ಜಿಮ್ಸ್ ಆಸ್ಪತ್ರೆಯವರೇ ಐಸಿಯು ಘಟಕದಲ್ಲಿ ಮತ್ತೊಂದು ಬೆಡ್ ವ್ಯವಸ್ಥೆ ಮಾಡಿ ಒಂದೇ ಯಂತ್ರಕ್ಕೆ ಎರಡು `ಫ್ಲೋ ಮೀಟರ್’ ಅಳವಡಿಸಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next