Advertisement
ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 2023ರ ವರೆಗೆ ಬಿಪಿಎಲ್ ಹಾಗೂ ಎಪಿಎಲ್ ಎರಡಕ್ಕೂ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. 2021ರ ನವೆಂಬರ್‌ನಲ್ಲಿ 3,598 ಬಿಪಿಎಲ್ ಅರ್ಜಿ ಸಕ್ರಿಯಗೊಳಿಸಲಾಗಿತ್ತು. 2022ರ ಆಗಸ್ಟ್‌ನಲ್ಲಿ 4,367 ಅರ್ಜಿಗಳನ್ನು ಸಕ್ರಿಯಗೊಳಿಸಲಾಗಿದೆ. ಮೂರನೇ ಹಂತ ದಲ್ಲಿ ಈ ವರ್ಷದ ನವೆಂಬರ್‌ಗೆ ಸುಮಾರು 1,102 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 3,400 ಬಿಪಿಎಲ್ ಹಾಗೂ 3,402 ಅರ್ಜಿಗಳು ಬಾಕಿ ಉಳಿದಿವೆ. ದ.ಕ. ಜಿಲ್ಲೆಯಲ್ಲಿ ಒಟ್ಟು 5,512 ಅರ್ಜಿಗಳು ಬಾಕಿ ಉಳಿದುಕೊಂಡಿವೆ.
2022ರ ಸೆಪ್ಟಂಬರ್‌ನಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೇ ರೇಷನ್ ಕಾರ್ಡ್ ನೋಂದಣಿ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು. ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದಿತ್ತು. ಈ ಸಂದರ್ಭದಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜ ನೆಯ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದ್ದು, ನೋಂದಣಿ ಸಂದರ್ಭ ಹಲ ವರ ರೇಷನ್ ಕಾರ್ಡ್‌ಗಳು ರದ್ದಾಗಿರುವುದು ಗಮನಕ್ಕೆ ಬಂದಿದೆ. 4 ತಿಂಗಳಿಗೂ ಅಧಿಕ ಸಮಯದಿಂದ ಪಡಿತರ ಪಡೆಯ ದಿರುವುದು ಹಾಗೂ ಹಳೆಯ ಕಾರ್ಡ್ ಗಳನ್ನು ಸೂಕ್ತ ದಾಖಲೆ ನೀಡಿ ಅಪ್‌ಡೇಟ್ ಮಾಡದಿರುವ ಕಾರಣ ಹಲವಾರು ಮಂದಿಯ ಕಾರ್ಡ್‌ಗಳನ್ನು ರದ್ದುಪಡಿಸಲಾಗಿತ್ತು.
Related Articles
ಮೂಲಗಳ ಪ್ರಕಾರ, ರಾಜ್ಯ ಸರಕಾರ ಸದ್ಯಕ್ಕೆ ರೇಷನ್ ಕಾರ್ಡ್ ನೋಂದಣಿ ಪೋರ್ಟಲ್ ತೆರೆಯುವುದು ಕಷ್ಟ. ಒಂದೆಡೆ ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ಮಂದಿ ಸರಕಾರದ ವಿವಿಧ ಯೋಜನೆಗಳ ಸದು ಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೆ ರೇಷನ್ ಕಾರ್ಡ್ ಪಡೆದುಕೊಂಡವರಿಗೆ ಹೆಚ್ಚು ವರಿ ಯಾಗಿ ಈ ಸೇವೆ ನೀಡು ವುದು ಸರಕಾರಕ್ಕೆ ಹೊರೆಯಾಗಿ ಪರಿಣಮಿ ಸಲಿದೆ. ಈ ಕಾರಣಕ್ಕೆ ಆದಷ್ಟು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಹೇಳಲಾಗಿದೆ.
Advertisement
ದಿನನಿತ್ಯ ವಿಚಾರಣೆಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರ ಸಹಿತ ಆಹಾರ ಇಲಾಖೆಗೆ ದಿನನಿತ್ಯ ಹಲ ವಾರು ಮಂದಿ ಕರೆ ಮಾಡಿ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯ ಸರಕಾರದ ಸೂಚನೆ ಬಂದರಷ್ಟೇ ಎಲ್ಲೆಡೆಪೋರ್ಟಲ್ ನೋಂದಣಿ ಆರಂಭಗೊಳ್ಳುವ ಸಾಧ್ಯತೆಗಳಿವೆ. ಶೀಘ್ರಗತಿ ಯಲ್ಲಿ ಇದು ಕಾರ್ಯರೂಪಕ್ಕೆ ಬಂದರೆ ಮಾತ್ರ ಸೌಲಭ್ಯ ವಂಚಿತರು ರಾಜ್ಯ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಮುಖ್ಯವಾಗಿ ಸಬ್ಸಿಡಿ ದರದಲ್ಲಿ ಪಡಿತರ ಅಂಗ ಡಿಯಿಂದ ಆಹಾರ ಸರಬರಾಜು ಪಡೆ ಯಲು, ಗುರುತಿನ ಪುರಾವೆಗೆ, ಬ್ಯಾಂಕ್ ಖಾತೆ ತೆರಯಲು ಮತ್ತು ಬ್ಯಾಂಕ್‌ಗಳನಡುವೆ ಹಣ ವರ್ಗಾವಣೆಗೆ, ಆದಾಯ ತೆರಿಗೆ ಪಾವತಿಸಲು, ಹೊಸ ಮತದಾರರ ಗುರುತಿಸಿ ಚೀಟಿ ಪಡೆಯಲು, ಮೊಬೈಲ್ ಸಿಮ್ ಖರೀದಿಸಲು, ಚಾಲನಾ ಪರವಾನಿಗೆ ಪಡೆಯಲು, ಹೊಸ ಎಲ್‌ಪಿಜಿ ಸಂಪ ರ್ಕ ಪಡೆಯಲು, ಜೀವವಿಮೆ ಹಿಂಪಡೆ ಯಲು ಸಹಿತ ವಿವಿಧ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಅಗತ್ಯವಾಗುತ್ತದೆ. ರೇಷನ್ ಕಾರ್ಡ್
ನೋಂದಣಿ ಸ್ಥಗಿತಗೊಂಡಿ ರುವವರು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕು. ಸದ್ಯಕ್ಕೆ ಯಾವುದೇ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿಲ್ಲ. ಸರಕಾರ ಸೂಚನೆ ನೀಡಿದರೆ ಶೀಘ್ರದಲ್ಲಿ ಆಯಾ ಜಿಲ್ಲಾಮಟ್ಟದಲ್ಲಿಯೂ ಸುತ್ತೋಲೆ ಹೊರಡಿಸಲಾಗುವುದು.
– ರವೀಂದ್ರ, ಉಪ ನಿರ್ದೇಶಕರು (ಪ್ರಭಾರ) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ