Advertisement

“ಮಹಾ” ಸರಕಾರ ರಚನೆಗೆ ಶಿವಸೇನಾ ಅಮಿತ್ ಶಾ ಮುಂದಿಟ್ಟ ಅಸ್ತ್ರ ಏನು ಗೊತ್ತಾ?

09:44 AM Oct 27, 2019 | Team Udayavani |

ಮುಂಬೈ:ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇದೀಗ ಮುಖ್ಯಮಂತ್ರಿ ಸ್ಥಾನದ (50;50) ಬಗ್ಗೆ ಭಾರತೀಯ ಜನತಾ ಪಕ್ಷ ಮತ್ತು ಅಮಿತ್ ಶಾ ಲಿಖಿತವಾಗಿ ಬರೆದುಕೊಟ್ಟ ಬಳಿಕವೇ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಗಲಿದೆ ಎಂದು ಶಿವಸೇನಾ ಬಹಿರಂಗವಾಗಿ ಸಂದೇಶ ರವಾನಿಸಿದೆ.

Advertisement

ಶನಿವಾರ ಶಿವಸೇನಾದ ಶಾಸಕರು ಮತ್ತು ಉದ್ಧವ್ ಠಾಕ್ರೆ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಶಾಸಕ ಸರ್ನಾಯಕ್, ಶಿವಸೇನಾದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿಗಾದಿ ಬಿಜೆಪಿ ಮತ್ತು ಶಿವಸೇನಾಗೆ ನೀಡುವ ಬಗ್ಗೆ (ಎರಡೂವರೆ ವರ್ಷ ಹಂಚಿಕೆ ಆಧಾರದಲ್ಲಿ) ಬಿಜೆಪಿ ಹೈಕಮಾಂಡ್ (ಅಮಿತ್ ಶಾ) ಅಥವಾ ದೇವೇಂದ್ರ ಫಡ್ನವೀಸ್ ಲಿಖಿತವಾಗಿ ಬರೆದುಕೊಟ್ಟ ನಂತರವೇ ಸರಕಾರ ರಚನೆಯಾಗಲಿದೆ ಎಂದು ಉದ್ಧವ್ ಜೀ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಸರ್ನಾಯಕ್ ತಿಳಿಸಿದ್ದಾರೆ.

ಕೆಲವು ಕಾರಣಗಳಿಂದಾಗಿ ನಾವು ಚುನಾವಣೆಯನ್ನು ನಾವು 50;50 ಸೂತ್ರದ ಮೂಲಕ ಸೀಟು ಹಂಚಿಕೆ ಮಾಡಿಕೊಂಡಿಲ್ಲ. ಆದರೆ ಈಗ ಬಿಜೆಪಿ ಚುನಾವಣಾ ಪೂರ್ವದ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಹೇಳಿದೆ. ಆದರೆ ಮುಖ್ಯಮಂತ್ರಿ ಸ್ಥಾನ ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಅಧಿಕೃತವಾಗಿ ಬರೆದುಕೊಟ್ಟ ಮೇಲೆಯೇ ಸರಕಾರ ರಚನೆಯಾಗಲಿದೆ ಎಂದು ಶಿವಸೇನಾ ಸ್ಪಷ್ಟ ಸಂದೇಶ ರವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next