Advertisement

ಅನುವಂಶಿಕ ದೇಗುಲ ಸರ್ಕಾರದ ವಶಕ್ಕಿಲ್ಲ: ಸಚಿವ ರುದ್ರಪ್ಪ ಲಮಾಣಿ

06:55 AM Dec 22, 2017 | |

ಹಾವೇರಿ: ಕೌಟುಂಬಿಕ, ಒಂದೇ ಜಾತಿಗೆ ಸೇರಿದ ಹಾಗೂ ಅನುವಂಶಿಕ ದೇವಸ್ಥಾನಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದಿಲ್ಲ ಎಂದು ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ವರ್ಷಗಳ ಹಿಂದೆ ರಾಜ್ಯದಲ್ಲಿರುವ 34,559 ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆ ಹೊರಡಿಸಿದ ದೇವಸ್ಥಾನಗಳಲ್ಲಿ ಕೌಟುಂಬಿಕ, ಒಂದೇ ಜಾತಿಗೆ ಸೇರಿದ ಹಾಗೂ ಅನುವಂಶಿಕ ದೇವಸ್ಥಾನಗಳು, ಕೆಲವು ಮಠಗಳೂ ಸೇರಿದ್ದವು. ಈ ಅಧಿಸೂಚನೆ ಅನ್ವಯ ಜಿಲ್ಲಾ ಧಾರ್ಮಿಕ ಪರಿಷತ್‌ಗಳು ಈಗ ಎಲ್ಲ ದೇವಸ್ಥಾನಗಳ ಆಸ್ತಿ ಮಾಹಿತಿ ಸಂಗ್ರಹಿಸಲು, ನಾಮನಿರ್ದೇಶನ ಮಾಡಲು ಮುಂದಾದಾಗ ದೇವಸ್ಥಾನದವರು ಆತಂಕಗೊಂಡಿದ್ದರು. 

ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಈ ಬಗ್ಗೆ ಚರ್ಚಿಸಿ ಅಧಿಸೂಚನೆಯಲ್ಲಿರುವ ಕೌಟುಂಬಿಕ, ಒಂದೇ ಜಾತಿಗೆ ಸೇರಿದ ಹಾಗೂ ಆನುವಂಶಿಕ ದೇವಸ್ಥಾನಗಳನ್ನು ಹೊರಡಿಸಲು ತೀರ್ಮಾನಿಸಲಾಗಿದೆ ಎಂದರು. ಅಧಿಸೂಚನೆಯಿಂದ ಹೊರಗಿಡುವಂತೆ ಕೋರಿ ಈಗಾಗಲೇ 100 ಅರ್ಜಿಗಳು ಬಂದಿದೆ. ಅವುಗಳಲ್ಲಿ 50 ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಸರಿಪಡಿಸಲು ಸೂಚಿಸಲಾಗಿದೆ. ಅರ್ಚಕರು, ಮಠದವರು ತಪ್ಪು ತಿಳಿವಳಿಕೆಯಿಂದಾಗಿ ಸರ್ಕಾರ ತಮ್ಮ ಮಠ, ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಆತಂಕಗೊಂಡಿದ್ದರು. ಈಗ ಅಧಿಸೂಚನೆಯಿಂದ ಅಂತಹ ದೇವಸ್ಥಾನಗಳನ್ನು ಹೊರಗಿಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಅವರನ್ನು ಆತಂಕ ದೂರ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next