Advertisement

ಯಾವುದೇ ಧಾರ್ಮಿಕ ಚಟುವಟಿಕೆ ನಿರ್ಬಂಧಿಸಿಲ್ಲ; ಸಮವಸ್ತ್ರ ನಿಗದಿ ಅಷ್ಟೆ

11:56 PM Sep 21, 2022 | Team Udayavani |

ಹೊಸದಿಲ್ಲಿ: “ಹಿಜಾಬ್‌ ಅನ್ನು ಕರ್ನಾಟಕದಲ್ಲಿ ನಿಷೇಧಿಸ ಲಾ ಗಿದೆ ಎಂಬಂತೆ ಆರೋಪಗಳನ್ನು ಮಾಡ ಲಾಗುತ್ತಿದೆ. ಇಂದು ನಾನು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ಅದೇನೆಂದರೆ, ರಾಜ್ಯ ಸರಕಾರ ಹಿಜಾಬ್‌ ಅನ್ನು ನಿಷೇಧಿಸಿಲ್ಲ. ನಿಷೇಧಿಸುವ ಉದ್ದೇಶವೂ ಇಲ್ಲ.

Advertisement

ಸರಕಾರವು ಧಾರ್ಮಿಕವಾಗಿ ನಿಷ್ಪಕ್ಷವಾದಂಥ ಸಮವಸ್ತ್ರವನ್ನು ನಿಗದಿಪಡಿಸಿದೆ ಅಷ್ಟೆ.’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ಪ್ರಕರಣದ ವಿಚಾರಣೆ ವೇಳೆ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ವಾದ ಮಂಡಿಸಿದರು.

ಇದೇ ವೇಳೆ, “ಶಾಲೆ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿದರೆ, ಇತರ ವಿದ್ಯಾರ್ಥಿಗಳನ್ನು ವೈವಿಧ್ಯಕ್ಕೆ ತೆರೆದುಕೊಳ್ಳಲು ಹಾಗೂ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಲು ಅನುವು ಮಾಡಿಕೊಡುತ್ತದೆಯಲ್ಲವೇ’ ಎಂದು ನ್ಯಾ| ಸುಧಾಂಶು ಧುಲಿಯಾ ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next