ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆ ಆವರಿಸಿದೆ. ಹಾಗಾಗಿ ಬೆಂಗಳೂರು ಸೇರಿ ಕೆಲವು ಪ್ರಾಂತ್ಯಗಳಲ್ಲಿನ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ಸಿಗುತ್ತಿಲ್ಲ ಎಂಬ ವದಂತಿಗಳನ್ನು ಕೇಂದ್ರ ಸರಕಾರ ಅಲ್ಲಗಳೆದಿದೆ.
ಕೆಲವು ಪ್ರಾಂತ್ಯಗಳಲ್ಲಿರುವ ಪೆಟ್ರೋಲ್ ಬಂಕ್‌ಗಳ ಮಾಲಕರಿಂದ ಸರಕಾರಿ ತೈಲ ಕಂಪೆನಿಗಳಿಗೆ ಬರಬೇಕಿರುವ ಬಾಕಿ ಹಣ ಪಾವತಿಯಾಗಿಲ್ಲ. ಆ ಕಾರಣದಿಂದಾಗಿ ಆ ಪ್ರಾಂತ್ಯಗಳಲ್ಲಿನ ಕೆಲವು ಬಂಕ್‌ಗಳಿಗೆ ತೈಲ ಸರಬರಾಜನ್ನು ಕೆಲವು ದಿನಗಳ ಮಟ್ಟಿಗೆ ತಡೆ ಹಿಡಿದಿರಬಹುದು. ಅದರ ಪರಿಣಾಮ ಕೆಲವು ಬಂಕ್‌ಗಳಲ್ಲಿ ತೈಲ ಸಿಗದಂತಾಗಿರಬಹುದು.
ಆದರೆ ಇದರ ಆಧಾರದಲ್ಲಿ ದೇಶದಲ್ಲಿ ತೈಲ ಅಭಾವ ಕಾಣಿಸಿಕೊಂಡಿದೆ ಎಂಬ ವಿಚಾರ ಸುಳ್ಳು ಎಂದು ಕೇಂದ್ರದ ಮೂಲಗಳು ಹೇಳಿವೆ. “ಇಂಡಿಯನ್ ಆಯಿಲ್’ನ ವಿ. ಸತೀಶ್ ಕುಮಾರ್ ಟ್ವೀಟ್ ಮಾಡಿ, “ದೇಶದೆಲ್ಲೆಡೆ ತೈಲ ಸರಬರಾಜಿಗೆ ಅಡ್ಡಿಯಾಗಿಲ್ಲ’ ಎಂದಿದ್ದಾರೆ.