Advertisement

ಗಣರಾಜ್ಯೋತ್ಸವ ಹಿನ್ನೆಲೆ: ಒಂದು ವಾರ ದಿಲ್ಲಿಯಲ್ಲಿ 2 ಗಂಟೆ ಕಾಲ ವಿಮಾನ ಸಂಚಾರ ರದ್ದು

09:57 AM Jan 14, 2020 | Nagendra Trasi |

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳ ಕಾಲ 2 ಗಂಟೆ ಅವಧಿ ವಿಮಾನ ಲ್ಯಾಂಡ್ ಆಗಲು ಮತ್ತು ಟೇಕಾಫ್ ಆಗಲು ಅನುಮತಿ ಇಲ್ಲ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಎಲ್ಲಾ ಪೈಲಟ್ ಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ.

Advertisement

ಜನವರಿ ತಿಂಗಳಲ್ಲಿ ಏಳು ದಿನಗಳ ಕಾಲ ವಿಮಾನ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗಲು ಎರಡು ಗಂಟೆಗಳ ಕಾಲ ನಿಷೇಧ ಹೇರಲಾಗಿದೆ. ಜನವರಿ 18, 20, 21, 22, 23, 24 ಮತ್ತು 26ರಂದು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.15ರಿಂದ 12.15ರವರೆಗೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ವರದಿ ತಿಳಿಸಿದೆ.

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಕುರಿತು ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್ ಅವರು ಸಬ್ ಡಿವಿಷನಲ್ ಪೊಲೀಸ್ ಆಫೀಸರ್ಸ್ಸ್ ಮತ್ತು ಠಾಣಾಧಿಕಾರಿಗಳ ಜತೆ ಮಾತುಕತೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಭಯೋತ್ಪದಾನಾ ನಿಗ್ರಹದ ನಿಟ್ಟಿನಲ್ಲಿ ಗಣರಾಜ್ಯೋತ್ಸವಕ್ಕೂ ಮುನ್ನ ಬಾಡಿಗೆದಾರರ ವೆರಿಫಿಕೇಶನ್, ಹೋಟೆಲ್ಸ್, ಗೆಸ್ಟ್ ಹೌಸ್ ಗಳ ತಪಾಸಣೆ ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಮಾರ್ಕೆಟ್, ಮಾಲ್ಸ್ ಮತ್ತು ಧಾರ್ಮಿಕ ಸ್ಥಳಗಳಿಗೆ ಭಾರೀ ಭದ್ರತೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next