Advertisement

ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿದ್ದ ಭ್ರೂಣಗಳಲ್ಲಿ ಜನ್ಮಜಾತ ಬೆಳವಣಿಗೆಯ ವೈಪರೀತ್ಯ

10:02 PM Jun 25, 2022 | Team Udayavani |

ಬೆಳಗಾವಿ: ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿರುವ ಭ್ರೂಣಗಳು ಗಂಡು ಭ್ರೂಣಗಳಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆ ಅಲ್ಲ ಎಂಬುದು ಗೊತ್ತಾಗುತ್ತದೆ. ಆರು‌ ಗಂಡು ಭ್ರೂಣಗಳು ಸ್ಥೂಲ‌ ಜನ್ಮಜಾತ ಬೆಳವಣಿಗೆಯ ವೈಪರೀತ್ಯ ಹೊಂದಿದೆ ಎಂಬುದು ವೈದ್ಯಕೀಯ ತಜ್ಞರ ವರದಿಯಲ್ಲಿ ತಿಳಿಸಲಾಗಿದೆ.ಫಾರ್ಮಾಲಿನ್ ಬಳಸಿ ಸಂಗ್ರಹಾಲಯದಲ್ಲಿ ಶೇಖರಿಸಿಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.

Advertisement

ಆದಾಗ್ಯೂ ಭ್ರೂಣಗಳು ಹೇಗೆ ಸಂಗ್ರಹಿಸಲಾಯಿತು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು.ಇದು‌‌ ಕಾನೂನು ಬಾಹಿರವಾ ಗಿರುವುದರಿಂದ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಮೂಡಲಗಿ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಹಳ್ಳದಲ್ಲಿ 7 ಭ್ರೂಣಗಳು ಐದು ಡಬ್ಬಗಳಲ್ಲಿ ಪತ್ತೆಯಾಗಿದ್ದವು. ಗಮನಿಸಿದ ಸ್ಥಳೀಯರು ಮೂಡಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು, ಬಳಿಕ ಭ್ರೂಣಗಳನ್ನು ಹಳ್ಳದಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಪರಿಶೀಲನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next