ಜೋಧ್‌ಪುರ: ಯಾವುದೇ ಮದುವೆಗೆ ಅದ್ಧೂರಿ ಅಲಂಕಾರ ಮಾಡುವಂತಿಲ್ಲ. ಡಿಜೆ ಹಾಕಿ ನರ್ತಿಸುವಂತಿಲ್ಲ. ಪಟಾಕಿ ಹೊಡೆದು ಗದ್ದಲ ಮಾಡುವಂತಿಲ್ಲ. ಇದು ರಾಜಸ್ಥಾನದ ಪಾಲಿ ಜಿಲ್ಲೆಯ ಎರಡು ಪ್ರಮುಖ ಸಮುದಾಯಗಳು ಹೊರಡಿಸಿರುವ ನಿಯಮ.
Advertisement
ಕುಮಾವತ್ ಮತ್ತು ಜಟ್ ಸಮುದಾಯಗಳು ಇಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. “ಮದುವೆ ಎನ್ನುವುದು ದೈವಿಕ ಆಚರಣೆ. ಆ ಆಚರಣೆಯಲ್ಲಿ ವರ ಗಡ್ಡ ಬಿಟ್ಟುಕೊಂಡು ಫ್ಯಾಷನ್ ತೋರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಆದರೆ ಇನ್ನು ಮುಂದೆ ನಮ್ಮ ಸಮುದಾಯದ ಮದುವೆಗಳಲ್ಲಿ ವರ ಕ್ಲೀನ್ ಶೇವ್ ಮಾಡಿರಬೇಕು. ವರ ಕುದುರೆ ಮೆರವಣಿಗೆ ಮಾಡಿಕೊಂಡು ಮದುವೆ ಸ್ಥಳಕ್ಕೆ ಬರುವುದಕ್ಕೆ. ಬೆಲೆಬಾಳುವ ಉಡುಗೊರೆಗೂ ನಿಷೇಧ ಹೇರಲಾಗಿದೆ.