ನವದೆಹಲಿ: ರೈಲ್ವೆ ಟಿಕೆಟ್‌ಗಳಲ್ಲಿ ಹಿರಿಯ ನಾಗರಿಕರಿಗೆ ಕೊಡಲಾಗುತ್ತಿದ್ದ ರಿಯಾಯಿತಿಯನ್ನು ತೆಗೆದುಹಾಕಿದ್ದರಿಂದಾಗಿ ಕಳೆದ 2 ವರ್ಷಗಳಲ್ಲಿ ರೈಲ್ವೆ ಇಲಾಖೆಗೆ 1,500 ಕೋಟಿ ರೂ. ಹೆಚ್ಚುವರಿ ಆದಾಯ ಸಿಕ್ಕಿದೆ.
ರೈಲ್ವೆ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ, 2020ರ ಮಾ.20ರಿಂದ 2022ರ ಮಾ.31ರವರೆಗೆ ರೈಲಿನಲ್ಲಿ ಪ್ರಯಾಣ ಮಾಡಿದ 7.31 ಕೋಟಿ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಕೊಡಲಾಗಿಲ್ಲ.
ಇದನ್ನೂ ಓದಿ:5 ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ರೆಡ್ ಅಲರ್ಟ್
ಒಟ್ಟಾರೆಯಾಗಿ ಹಿರಿಯ ನಾಗರಿಕರಿಂದಾಗಿ 3,464 ಕೋಟಿ ರೂ. ಆದಾಯ ಬಂದಿದೆ. ಇಲಾಖೆ ನಿಗದಿ ಪಡಿಸಿರುವಂತೆ ಮಹಿಳಾ ಹಿರಿಯ ನಾಗರಿಕರಿಗೆ ಶೇ.50 ಮತ್ತು ಪುರುಷ ಹಿರಿಯ ನಾಗರಿಕರಿಗೆ ಶೇ.40 ರಿಯಾಯಿತಿ ಕೊಟ್ಟಿದ್ದರೆ ಈ ಆದಾಯವು 1,500 ಕೋಟಿ ರೂ. ಕಡಿಮೆಯಾಗಿರುತ್ತಿತ್ತು ಎಂದು ತಿಳಿಸಲಾಗಿದೆ.
Related Articles