ಬೆಳಗಾವಿ: ಬಿಜೆಪಿ ಯಾವುದೇ ಕ್ಷೇತ್ರದಲ್ಲಿ ಯಾವ ಪಕ್ಷದೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ರಾಜಕಾರಣ ವನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ. ಟಿ. ರವಿ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯ 18 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಗುರಿ ಹೊಂದಲಾಗಿದೆ. ಎಲ್ಲ ಕಡೆಗೂ ಬಿಜೆಪಿ ತನ್ನದೇ ವರ್ಚಸ್ಸು ಹೊಂದಿ ರುವುದರಿಂದ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿ ಕೊಂಡಿದ್ದೇವೆ.
ಉತ್ತರ ಪ್ರದೇಶ ಲೋಕಸಭೆ ಚುನಾವಣೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಸ್ತುವಾರಿ ವಹಿಸಿಕೊಂಡಿದ್ದರು. ಅದಕ್ಕೂ ಮುನ್ನ ಅಲ್ಲಿ ಬಿಜೆಪಿಯ ಕೇವಲ 10 ಸಂಸದರಿದ್ದರು. ರಾಜಕೀಯ ಚಾಣಕ್ಯ ಅಮಿತ್ ಶಾ ತಮ್ಮ ರಾಜಕೀಯ ತಂತ್ರಗಾರಿಕೆಯಿಂದ 73 ಸಂಸದರನ್ನು ಗೆಲ್ಲಿಸಿಕೊಂಡಿ ದ್ದಾರೆ. ಬಿಜೆಪಿ ಸತತ ಎರಡು ಬಾರಿ ಅ ಧಿಕಾರದ ಗದ್ದುಗೆ ಏರಿದೆ. ಇದಕ್ಕೆ ಮೋದಿ ಹಾಗೂ ಶಾ ಜೋಡಿಯ ಕಾರ್ಯವೈಖರಿ ಕಾರಣ ಎಂದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಅನೇಕ ಯೋಜನೆಗಳ ಶೇ.70ರಷ್ಟು ಫಲಾನುಭವಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಇದ್ದಾರೆ. ಅವರನ್ನು ಮತದಾರರಾಗಿ ಪರಿವರ್ತಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಿದೆ. ಅದರಲ್ಲಿ ನಾವು ಯಶಸ್ಸು ಕಂಡರೆ 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯ ವಾಗಲಿದೆ. ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಯಲ್ಲಿ ಆಕಾಂ ಕ್ಷಿಗಳು ಹೆಚ್ಚಿರುವುದು ತಪ್ಪಲ್ಲ. ಆದರೆ ಹಾದಿ ಬೀದಿಯಲ್ಲಿ ಟಿಕೆಟ್ ಬಗ್ಗೆ ಚರ್ಚಿಸಬಾರದು. ಗೆಲ್ಲುವ ಸಮರ್ಥರಿಗೆ ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎಂದರು.