Advertisement
ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ನಿಷೇಧ ಇರುತ್ತದೆ. ಬಳಿಕ ನದಿಗಳಲ್ಲಿ ಮರಳಿನ ಸಂಗ್ರಹದ ಅಧ್ಯಯನ ನಡೆಸಿ, ವರದಿಯೊಂದಿಗೆ ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಗುತ್ತದೆ. ಅನಂತರ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಅನುಮತಿ ನೀಡಲಾಗುತ್ತದೆ.
Related Articles
ಸದ್ಯ ಉಭಯ ಜಿಲ್ಲೆಗಳಲ್ಲಿ ಮರಳು ಬೇಕಾದವರಿಗೆ ರಾತೋರಾತ್ರಿ ಸಿಆರ್‌ಝಡ್ ಪ್ರದೇಶದ ನಯವಾದ ಉತ್ತಮ ದರ್ಜೆ ಮರಳನ್ನು ಪೂರೈಸುವ ಜಾಲವೇ ಇದೆ. ಇದು ಒಂದು ಲೋಡ್‌ಗೆ 5ರಿಂದ 6,000 ರೂ.ಗೆ ಸಿಗುತ್ತದೆ. ಅಧಿಕಾರಿಗಳು ಇದನ್ನು ನಿಯಂತ್ರಿಸುವ ಗೋಜಿಗೂ ಹೋಗುತ್ತಿಲ್ಲ.
Advertisement
ಕೇಂದ್ರದಿಂದ ಮಾಹಿತಿ ಇಲ್ಲಕೇಂದ್ರ ಸರಕಾರದ ಪರಿಸರ, ಸಿಆರ್‌ಝಡ್, ಕೈಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳು ಸಭೆ ನಡೆಸಿ ಈ ಕುರಿತ ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿದ್ದು, ಇದಕ್ಕೆ ರಾಜ್ಯ ಸರಕಾರ ಒತ್ತಡ ಹಾಕಬೇಕಾಗುತ್ತದೆ. ಆದರೆ ಹಿಂದೆಲ್ಲ ಆಗಸ್ಟ್ ತಿಂಗಳಿನಲ್ಲಿ ನಡೆಯುತ್ತಿದ್ದ ಸಭೆ ಈ ಬಾರಿ ನಡೆದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಸುಮಾರು 16 ಬ್ಲಾಕ್ ಗುರುತಿಸಲಾಗಿತ್ತಾದರೂ ಸದ್ಯ ಮಳೆ ಇರುವ ಕಾರಣ ಮರಳು ತೆಗೆಯುವುದು ಸಾಧ್ಯವಾಗುತ್ತಿಲ್ಲ.