Advertisement
ಬಸ್ ಸ್ಟಾಂಡ್ ಇಲ್ಲದ್ದರಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು, ಮಹಿಳೆಯರು, ಮಕ್ಕಳು ಬಿಸಿಲು, ಮಳೆಯಲ್ಲೇ ಪರದಾಡುವಂತಾಗಿದೆ. ಹೆದ್ದಾರಿ ನಿರ್ಮಾಣದ ಸಂದರ್ಭವೂ ಇಲ್ಲಿ ಬಸ್ ಬೇ ನಿರ್ಮಿಸಿಲ್ಲ. ಇದಲ್ಲದೇ ಉದ್ಯಾವರ ಫಾರೆಸ್ಟ್ ಗೇಟ್, ಬಲಾಯಿಪಾದೆ ಜಂಕ್ಷನ್, ಪಾಂಗಾಳದಲ್ಲಿ, ಕಾಪುವಿನ ಸರ್ವಿಸ್ ರಸ್ತೆಯ ಇಕ್ಕೆಲಗಳಲ್ಲೂ ಬಸ್ಸು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೂಕ್ತ ತಂಗುದಾಣದ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮೊದಲು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದ್ದರೂ, ಹೆದ್ದಾರಿ ನಿರ್ಮಾಣಕ್ಕೆ ಬಲಿಯಾಗಿದೆ.
ಪ್ರಯಾಣಿಕರ ಶಾಶ್ವತ ತಂಗುದಾಣಕ್ಕೆ ನವಯುಗದವರು ಸ್ಥಳ ನಿಗದಿ ಪಡಿಸಿದ್ದು, ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಲು ಮಾತ್ರ ಪಂಚಾಯತ್‌ಗೆ ಅವಕಾಶ ಇದೆ. 2 ದಿನದೊಳಗೆ ಗಾಳಿಯಿಂದ ಹಾನಿಗೀಡಾದ ತಾತ್ಕಾಲಿಕ ತಂಗುದಾಣ ಸಿದ್ಧಗೊಳ್ಳಲಿದೆ.
ಇನಾಯತುಲ್ಲಾ ಬೇಗ್, ಪಿ.ಡಿ.ಒ. ಕಟಪಾಡಿ ಗ್ರಾ.ಪಂ. ಭರವಸೆ ಇದೆ
ಕೆನರಾ ಬ್ಯಾಂಕ್ ಬಳಿ ಮತ್ತು ಪೆಟ್ರೋಲ್ ಬಂಕ್ ಬಳಿ ಹೆದ್ದಾರಿ ನಿರ್ಮಾಣಕಾರರು ಬಸ್ಸು ತಂಗುದಾಣಕ್ಕೆ ಫೌಂಡೇಶನ್ ಹಾಕಿದ್ದಾರೆ. ತ್ವರಿತವಾಗಿ ಶಾಶ್ವತ ಬಸ್ಸುತಂಗುದಾಣ ನಿರ್ಮಿಸಿ ಕೊಡುವ ಭರವಸೆ ಇದೆ.
ವಿನಯ ಬಲ್ಲಾಳ್, ಸದಸ್ಯರು. ಕಟಪಾಡಿ ಗ್ರಾ.ಪಂ.
Related Articles
ಹೆಂಗಸರಿಗೆ ಮಕ್ಕಳನ್ನು ಹಿಡಿದುಕೊಂಡು ಬಸ್ಸು ಕಾಯಲು ಕಷ್ಟವಾಗುತ್ತಿದೆ. ಬಿಸಿಲು, ಮಳೆಗೆ ಇಲ್ಲಿ ನಿಲ್ಲಬೇಕಾಗಿರುವುದು ಸಮಸ್ಯೆ ತಂದೊಡ್ಡುತ್ತದೆ.
ದೀಪಾ ಪಿ. ಆಚಾರ್ಯ, ಪ್ರಯಾಣಿಕರು
Advertisement