Advertisement

College convocation ಕಪ್ಪು ಗೌನ್‌, ಟೋಪಿ ಬೇಡ: ಕೇಂದ್ರ ಸರಕಾರ

01:43 AM Aug 25, 2024 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಅಖಿಲ ಭಾರತ ವೈದ್ಯ­ಕೀಯ ವಿಜ್ಞಾನ ಸಂಸ್ಥೆ ಸೇರಿ ಎಲ್ಲ ಸರಕಾರಿ ಸ್ವಾಮ್ಯದ ಮೆಡಿಕಲ್‌ ಕಾಲೇಜುಗಳಲ್ಲಿ ಘಟಿಕೋತ್ಸವದ ವೇಳೆ ಕಪ್ಪು ಗೌನ್‌, ಕಪ್ಪು ಕ್ಯಾಪ್‌ ಧರಿಸುವುದು ಬೇಡ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ಅದು ವಸಾಹತು ಶಾಹಿ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಅದರ ಬದಲಾಗಿ ಭಾರ­ತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿ­ಸ­ಬೇಕು ಎಂದು ಸೂಚಿಸಿದೆ. ಸರಕಾರದ ಈ ನಿರ್ಧಾ­ರಕ್ಕೆ ವೈದ್ಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2015ರಲ್ಲಿ ಯುಜಿಸಿ ಎಲ್ಲ ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ದೇಶಿ ಸಂಸ್ಕೃತಿ ಬಿಂಬಿ­ಸುವ ವಸ್ತ್ರಗಳನ್ನು ಧರಿಸುವಂತೆ ಸೂಚಿಸಿತ್ತು. ಬಿಎಚ್‌ಯು ನಲ್ಲಿ 2015ರಲ್ಲಿ ಮೊದಲ ಬಾರಿಗೆ ಕುರ್ತಾ, ಧೋತಿ ಧರಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next