Advertisement

ಅಭಿವೃದ್ಧಿ ಕಾರ್ಯದಲ್ಲಿ ಪಕ್ಷಪಾತ ಬೇಡ

03:48 PM Jan 08, 2022 | Team Udayavani |

ಗೋಕಾಕ: ಕಲ್ಲೋಳಿ ಪಟ್ಟಣದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಪಾತ ಮಾಡಬೇಡಿ. ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಗಮನ ನೀಡುವಂತೆ ಕೆಎಂಎಫ್‌ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೂತನ ಪಪಂ ಸದಸ್ಯರಿಗೆ ಸಲಹೆ ನೀಡಿದರು.

Advertisement

ಪಪಂಗೆ ಆಯ್ಕೆಗೊಂಡ ನೂತನ ಸದಸ್ಯರನ್ನು ಎನ್‌ಎಸ್‌ ಎಫ್‌ ಅತಿಥಿ ಗೃಹದಲ್ಲಿ ಶುಕ್ರವಾರ ಅಭಿನಂದಿಸಿ ಅವರು ಮಾತನಾಡಿದರು. ಜನರ ಪ್ರೀತಿ, ವಿಶ್ವಾಸ ಗಳಿಸಿ ಮೂಲಭೂತ ಸಮಸ್ಯೆಗೆ ಸ್ಪಂದಿಸಿ ಮತದಾರರ ಋಣ ತೀರಿಸಬೇಕು. ಡಿ.27ರಂದು ನಡೆದ ಕಲ್ಲೋಳಿ ಪಪಂ ಚುನಾವಣೆಯಲ್ಲಿ ನಮ್ಮವರೇ ಎರಡು ಗುಂಪುಗಳಾಗಿ ಸ್ಪರ್ಧಿಸಿದ್ದರು. ಕೆಲವರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಇನ್ನೂ ಕೆಲವರು ಟಿಕೆಟ್‌ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದರಿಂದ ಎರಡು ಗುಂಪುಗಳಾದವು. ಒಟ್ಟಿನಲ್ಲಿ ನಮ್ಮದೇ ಗುಂಪು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು. ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು.

ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರು ಏನೇನೋ ಆರೋಪ ಮಾಡುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದ್ದು, ಜನರ ವಿಶ್ವಾಸ ಗಳಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದರು. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧ. ಪಪಂ ಅಭಿವೃದ್ಧಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ನಗರೋತ್ಥಾನ ಯೋಜನೆಯಡಿ ಸಾಕಷ್ಟು ಅನುದಾನ ನೀಡಿದ್ದಾರೆ. ಇದರಿಂದ ಪಪಂಗಳ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಪೂರಕವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಪಂ ನೂತನ ಸದಸ್ಯರು ಬೃಹತ್‌ ಹೂಮಾಲೆ ಹಾಕಿ ಸನ್ಮಾನಿಸಿದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಬಸವಂತ ದಾಸನವರ, ಸುಭಾಸ ಕುರಬೇಟ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶೀಲ್ದಾರ, ಮಲ್ಲಪ್ಪ ಹೆಬ್ಟಾಳ, ಮಲ್ಲಪ್ಪ ಕಡಾಡಿ, ಬಸವರಾಜ ಯಾದಗೂಡ, ರಾಮು ಗಾಣಿಗೇರ, ರಾಮಪ್ಪ ಹಡಗಿನಾಳ, ಮುತ್ತೆಪ್ಪ ಭಜಂತ್ರಿ, ಮಾಳಪ್ಪ ಸನದಿ, ಕಮಲವ್ವ ಕಳ್ಳಿಗುದ್ದಿ, ಯಲ್ಲಪ್ಪ ದಾಸನವರ, ಮೋಹನ ಗಾಡಿವಡ್ಡರ, ಶಿವಾನಂದ ಹೆಬ್ಟಾಳ, ಭೀಮಶಿ ಗೊರೋಶಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next